
ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. 7 ಜನರಿಗೆ ಹೊಸ ಬದುಕು ನೀಡಿದ್ದು, ಅಂಗಾಂಗ ದಾನದ ಮೂಲಕ ಮಾದರಿಯಾಗಿದ್ದಾರೆ.
ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಇರುವವರಿಗೆ ಮೂತ್ರಪಿಂಡ, ಕಣ್ಣು, ಯಕೃತ್, ಹೃದಯದ ಕವಾಟ ಅಳವಡಿಸಲಾಗಿದೆ.
ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರು ಯುವಕರಿಗೆ ಒಂದೊಂದು ಕಣ್ಣು ಜೋಡಣೆ ಮಾಡಲಾಗಿದೆ. ಜಯದೇವ ಆಸ್ಪತ್ರೆಯಲ್ಲಿ ಹೃದಯದ ಕವಾಟ ಜೋಡಿಸಲಾಗಿದೆ. 52 ವರ್ಷದ ಪುರುಷನಿಗೆ, 34 ವರ್ಷದ ಮಹಿಳೆಗೆ ಮೂತ್ರಪಿಂಡ ಜೋಡಣೆ ಮಾಡಲಾಗಿದ್ದು, 50 ವರ್ಷದ ಪುರುಷನಿಗೆ ಯಕೃತ್ ಜೋಡಣೆ ಮಾಡಲಾಗಿದೆ. ಈ ಮೂಲಕ ಸಂಚಾರಿ ವಿಜಯ್ 7 ಜನರ ಬಾಳಿಗೆ ಬೆಳಕಾಗಿದ್ದಾರೆ.