ನಟ ಸಲ್ಮಾನ್ ಖಾನ್ ಯಾವಾಗ್ಲೂ ಕುಟುಂಬದವರ ಜೊತೆಗಿರಲು ಇಷ್ಟಪಡ್ತಾರೆ. ತಾಯಿಯೇ ಅವರ ಜಗತ್ತು. ಬಾಂದ್ರಾ ಅಪಾರ್ಟ್ ಮೆಂಟ್ ನಲ್ಲಿ ತಂದೆ ಸಲೀಂ ಖಾನ್ ಹಾಗೂ ತಾಯಿ ಸಲೀಮಾ ಖಾನ್ ಜೊತೆಗೆ ಸಲ್ಲು ವಾಸಿಸ್ತಿದ್ದಾರೆ. ಐಷಾರಾಮಿ ಬಂಗಲೆಯಲ್ಲಿ ಆರಾಮಾಗಿ ಇರೋದು ಬಿಟ್ಟು ಅಪಾರ್ಟ್ ಮೆಂಟ್ ನಲ್ಲಿ ಯಾಕಿದ್ದಾರೆ ಅನ್ನೋದು ಎಲ್ಲರ ಪ್ರಶ್ನೆ.
ಈ ಹಿಂದೆ ಬಾಲಕನೊಬ್ಬ ಈ ಕುರಿತು ಸಲ್ಮಾನ್ ಖಾನ್ ಅವರನ್ನೇ ನೇರವಾಗಿ ಪ್ರಶ್ನಿಸಿದ್ದ. ಬಾಂದ್ರಾ ಅಪಾರ್ಟ್ಮೆಂಟ್ ಜೊತೆಗೆ ಸಲ್ಮಾನ್ ಗೆ ಅವಿನಾಭಾವ ಸಂಬಂಧವಿದೆ. ಸಲ್ಲು ಹುಟ್ಟಿ ಬೆಳೆದ ಜಾಗ ಇದು. ಗ್ಯಾಲಾಕ್ಸಿ ಅಪಾರ್ಟ್ ಮೆಂಟ್ ನಲ್ಲಿರೋ ಮನೆಗಳೆಲ್ಲ ಒಂದೇ ಕುಟುಂಬ ಎನ್ನುತ್ತಾರೆ ಸಲ್ಲು.
ಚಿಕ್ಕಂದಿನಲ್ಲಿ ಮಕ್ಕಳೆಲ್ಲ ಒಟ್ಟಾಗಿ ಆಟ, ಪಾಠ, ತುಂಟಾಟದಲ್ಲಿ ಕಳೆದ ಸಮಯವನ್ನು ಈಗಲೂ ಸಲ್ಲು ಜ್ಞಾಪಿಸಿಕೊಳ್ತಾರೆ. ತಮ್ಮ ಸಹೋದರ, ಸಹೋದರಿಯರು, ಮತ್ತು ಹೆತ್ತವರ ಜೊತೆಗೆ ಕಳೆದ ಪ್ರತಿ ಕ್ಷಣವೂ ಅತ್ಯಮೂಲ್ಯವಾದದ್ದು, ಹಾಗಾಗಿ ಈ ಅಪಾರ್ಟ್ ಮೆಂಟ್ ಬಿಟ್ಟು ದೊಡ್ಡ ಬಂಗಲೆಗೆ ಹೋಗಲು ಇಷ್ಟವಿಲ್ಲ ಅಂತಾ ಹೇಳ್ತಾರೆ ಸಲ್ಮಾನ್.