ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ರಾಧೆ ಚಿತ್ರ ವೀಕ್ಷಣೆಗೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಚಿತ್ರ ಈದ್ ಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಮಧ್ಯೆ ಸಲ್ಮಾನ್ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ.
ರಾಧೆ ಚಲನಚಿತ್ರ ಹಕ್ಕನ್ನು ಅತ್ಯಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿದೆ. ಈ ಚಿತ್ರದ ನಿರ್ಮಾಪಕರು ಚಿತ್ರದ ಹಕ್ಕನ್ನು 230 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಚಿತ್ರದ ಹಕ್ಕನ್ನು ಜಿ ಸ್ಟುಡಿಯೋ ಖರೀದಿಸಿದೆ. ಲಾಕ್ ಡೌನ್ ನಿಂದಾಗಿ ಬಾಲಿವುಡ್ ನಷ್ಟದಲ್ಲಿದೆ. ಈ ವೇಳೆ ಇಂಥ ದೊಡ್ಡ ಡೀಲ್ ಆಗಿರುವುದು ಖುಷಿ ವಿಷ್ಯ ಎನ್ನಲಾಗ್ತಿದೆ.
ಸಲ್ಮಾನ್ ಖಾನ್ ನಿರ್ಮಾಣದ ಎರಡನೇ ಚಿತ್ರವನ್ನೂ ಜಿ ಸ್ಟುಡಿಯೋ ಖರೀದಿ ಮಾಡಿದೆ. ಸಲ್ಮಾನ್ ನಿರ್ಮಾಣದ ಕಾಗಜ್ ವೆಬ್ ಸಿನಿಮಾವನ್ನು ಕೂಡ ಜಿ ಸ್ಟುಡಿಯೋ ಖರೀದಿ ಮಾಡಿತ್ತು. ರಾಧೆ ಚಿತ್ರವನ್ನು ಪ್ರಭುದೇವ್ ನಿರ್ದೇಶಿಸಿದ್ದಾರೆ. 2021ರಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.