
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್, ನಟ ಸಲ್ಮಾನ್ ಖಾನ್ ಹಾವು ಕಡಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ.
ಹಾವು ನನ್ನ ತೋಟದ ಮನೆಗೆ ಪ್ರವೇಶಿಸಿತ್ತು. ನಾನು ಅದನ್ನು ಕೋಲಿನಿಂದ ಹೊರಗೆ ತೆಗೆದುಕೊಂಡೆ. ಕ್ರಮೇಣ ಅದು ನನ್ನ ಕೈ ಸೇರಿತು. ನಾನು ಅದನ್ನು ಬಿಡಿಸಲು ಹಿಡಿದುಕೊಂಡಾಗಅದು ನನ್ನನ್ನು ಮೂರು ಬಾರಿ ಕಚ್ಚಿದೆ. ಅದೊಂದು ರೀತಿಯ ವಿಷಪೂರಿತ ಹಾವಾಗಿದ್ದು, 6 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಈಗ ಆರೋಗ್ಯವಾಗಿದ್ದೇನೆ ಎಂದು ಹಾವು ಕಡಿತದ ಬಗ್ಗೆ ನಟ ಸಲ್ಮಾನ್ ಖಾನ್ ತಿಳಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ರಾಯಗಢ ಜಿಲ್ಲೆಯ ಪನ್ವೇಲ್ ಫಾರ್ಮ್ ಹೌಸ್ ನಲ್ಲಿ ಘಟನೆ ನಡೆದಿತ್ತು.