ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ್ದಾರೆ. ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಕಾಂಬಿನೇಷನ್ ನಲ್ಲಿ ‘ಸಲಾರ್’ ಮೂಡಿ ಬರಲಿದೆ.
‘ಸಲಾರ್’ ಅಂದ್ರೆ ಲೀಡರ್, ಚೀಫ್, ಕಮಾಂಡರ್ ಎಂದರ್ಥವಿದೆ. ಈ ಹೊಸ ಚಿತ್ರದ ಬಗ್ಗೆ ಮಾತನಾಡಿರುವ ವಿಜಯ್ ಕಿರಗಂದೂರು ಅವರು, ಇಬ್ಬರು ಪ್ರತಿಭಾನ್ವಿತರೊಂದಿಗೆ ಸಿನಿಮಾ ಮಾಡಲು ಖುಷಿ ಇದೆ ಎಂದು ಹೇಳಿದ್ದಾರೆ.
ಅಂದ ಹಾಗೇ ಆಕ್ಷನ್ ಸಿನಿಮಾ ಇದಾಗಿದ್ದು, ಇಂದೆಂದೂ ಕಾಣಿಸಿಕೊಳ್ಳದ ಲುಕ್ ನಲ್ಲಿ ಪ್ರಭಾಸ್ ಮಿಂಚಲಿದ್ದಾರೆ. ಇಂತಹ ಪಾತ್ರವನ್ನು ಮೊದಲು ಮಾಡಿಲ್ಲ, ಚಿತ್ರೀಕರಣ ಸೆಟ್ ಗೆ ಹೋಗುವ ಕಾತರದಲ್ಲಿದ್ದೇನೆ ಎಂದು ಪ್ರಭಾಸ್ ಹೇಳಿಕೊಂಡಿದ್ದಾರೆ. ‘ಆದಿ ಪುರುಷ’ ಮತ್ತು ‘ರಾಧೆಶ್ಯಾಮ್’ ಪೂರ್ಣಗೊಂಡ ಕೂಡಲೇ ಪ್ರಭಾಸ್ ‘ಸಲಾರ್’ಗೆ ಬಣ್ಣ ಹಚ್ಚಲಿದ್ದಾರೆ. ‘ಕೆಜಿಎಫ್ 2’ ಪೂರ್ಣಗೊಳಿಸಿದ ಬಳಿಕ ಪ್ರಶಾಂತ್ ನೀಲ್ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.