2020 ಯಾರಿಗೂ ಸುಲಭವಾಗಿಲ್ಲ. ಪ್ರತಿಯೊಬ್ಬರು ಹೋರಾಟದ ಜೀವನ ನಡೆಸುತ್ತಿದ್ದಾರೆ. ಸಿನಿಮಾಗಳು ಥಿಯೇಟರ್ ಗೆ ಬರದ ಕಾರಣ ಈ ಉದ್ಯಮಕ್ಕೆ ಸಾಕಷ್ಟು ಹೊಡೆತ ಬಿದ್ದಿದೆ. ಈ ಎಲ್ಲದರ ಮಧ್ಯೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ.
ಈ ಹಿಂದೆ ಸೈಫ್, ಮತ್ತೊಮ್ಮೆ ತಂದೆಯಾಗ್ತಿರುವ ವಿಷ್ಯ ಹೇಳಿದ್ದರು. ಈಗ ಮತ್ತೊಂದು ವಿಷ್ಯ ತಿಳಿಸಿದ್ದಾರೆ. ಸೈಫ್, ಓದುವುದ್ರಲ್ಲಿ ಆಸಕ್ತಿ ಹೊಂದಿದ್ದಾರೆ. ಅವ್ರು ಅನೇಕ ಪುಸ್ತಕಗಳನ್ನು ಓದುತ್ತಿರುತ್ತಾರೆ. ಈಗ ಅವ್ರ ಜೀವನಚರಿತ್ರೆ ಬರೆಯಲು ಮುಂದಾಗಿದ್ದಾರೆ.
ಸೈಫ್ ಪುಸ್ತಕದಲ್ಲಿ ಅವ್ರ ಜೀವನ, ವೃತ್ತಿ ಜೀವನ, ಯಶಸ್ಸು, ಹಿನ್ನಡೆ, ಸ್ಪೂರ್ತಿ ನೀಡಿದ ಜನರು ಸೇರಿದಂತೆ ಅನೇಕ ವಿಷ್ಯಗಳಿರಲಿವೆ. ಹಿಂದಿನ ಘಟನೆಗಳನ್ನು ನೆನಪು ಮಾಡಿಕೊಳ್ಳುವುದು ಬಹಳ ಸುಂದರವಾಗಿರುತ್ತದೆ. ನಾನು ಸ್ವಾರ್ಥಿಯಾಗಿದ್ದೇನೆ. ಆದ್ರೆ ಇದು ಖುಷಿ ನೀಡುತ್ತದೆ. ನನಗೆ ಪುಸ್ತಕಗಳನ್ನು ಓದುವುದು ಬಹಳ ಇಷ್ಟ. ಇದೇ ಕಾರಣಕ್ಕೆ ನಾನು ಈ ದೊಡ್ಡ ಹೆಜ್ಜೆಯಿಡ್ತಿದ್ದೇನೆಂದು ಸೈಫ್ ಹೇಳಿದ್ದಾರೆ.