
ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಬೆನ್ನಲ್ಲೇ ಬಾಲಿವುಡ್ ನಲ್ಲಿನ ಸ್ವಜನ ಪಕ್ಷಪಾತದ ವಿರುದ್ಧ ದೊಡ್ಡ ಧ್ವನಿ ಎದ್ದಿದೆ.
ಪಕ್ಷಪಾತ ಎಸಗುತ್ತಿರುವ ಒಂದು ವರ್ಗದ ವಿರುದ್ಧ ಅಭಿಮಾನಿಗಳು ಸಿಟ್ಟಿಗೆದ್ದಿದ್ದು, ಅಂತಹ ನಟರ ವಿರುದ್ಧ ಅವಕಾಶ ಸಿಕ್ಕಲ್ಲೆಲ್ಲಾ ಹರಿಹಾಯುತ್ತಿದ್ದಾರೆ.
ಇದೀಗ ಪೂಜಾ ಭಟ್, ಆಲಿಯಾ ಭಟ್, ಸಂಜಯ್ ದತ್, ಆದಿತ್ಯ ರಾಯ್ ಅಭಿನಯದ ಸಡಕ್-2 ಚಿತ್ರದ ಟ್ರೈಲರ್ ನ್ನು ತಿರಸ್ಕರಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಸ್ವಾತಂತ್ರ್ಯ ದಿನದಂದು ಯೂಟ್ಯೂಬ್ ನಲ್ಲಿ ಹಮ್ ತುಮ್ ಹಿ ಹಾಡಿನ ಟ್ರೈಲರ್ ಬಿಡುಗಡೆಯಾಗಿತ್ತು. ಲಕ್ಷಾಂತರ ಜನರು ಡಿಸ್ಲೈಕ್ ಬಟನ್ ಒತ್ತುವ ಮೂಲಕ ತಿರಸ್ಕರಿಸಿದ್ದಾರೆ. ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಡಿಸ್ಲೈಕ್ ಪಡೆದ 3ನೇ ವೀಡಿಯೋ ಇದಾಗಿದೆ.