ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಯಥಾ ಸ್ಥಿತಿಯಲ್ಲಿದ್ದು, ಚೇತರಿಕೆ ಕಂಡು ಬರುತ್ತಿಲ್ಲ.
ವೆಂಟಿಲೇಟರ್ ಜೊತೆಗೆ ಹೃದಯ ಮತ್ತು ಶ್ವಾಸಕೋಶ ವ್ಯವಸ್ಥೆ ಯಂತ್ರ -ಇಸಿಎಂಒ ಅಳವಡಿಕೆ ಮಾಡಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಅವರ ಶ್ವಾಸಕೋಶಕ್ಕೆ ಹಾನಿಯಾಗಿದ್ದು ಎಸ್ಪಿಬಿ ಅವರಿಗೆ ತಜ್ಞ ವೈದ್ಯರ ತಂಡ ನಿಗಾವಹಿಸಿ ಚಿಕಿತ್ಸೆ ನೀಡುತ್ತಿದೆ. ಸದ್ಯ ಅವರು ಚಿಕಿತ್ಸೆಗೆ ಸ್ಪಂದಿಸುವ ರೀತಿ ಸಮಾಧಾನಕರವಾಗಿದೆ ಎಂದು ಹೇಳಲಾಗಿದೆ.
ಕೊರೊನಾ ಸೋಂಕು ತಗಲಿದ ಎಸ್ಪಿಬಿ ಆಗಸ್ಟ್ 5 ರಿಂದ ಆಸ್ಪತ್ರೆಯಲ್ಲಿದ್ದು ದಿನೇ ದಿನೇ ಅವರ ಆರೋಗ್ಯ ಕ್ಷೀಣಿಸಿದೆ. ಅವರೇ ಹಾಡಿದ ಹಾಡುಗಳನ್ನು ಕೇಳಿಸುವ ಮೂಲಕ ಚಿಕಿತ್ಸೆ ಮುಂದುವರೆಸಲಾಗಿದೆ. ಇನ್ನು ಎಸ್ಪಿಬಿ ಅವರ ಚೇತರಿಕೆಗೆ ಪ್ರಾರ್ಥಿಸಿ ಇಂದು ಸಂಜೆ ಚಿತ್ರರಂಗದಿಂದ ಪ್ರಾರ್ಥನೆ ಸಲ್ಲಿಸಲಾಗುವುದು.