
ಚೆನ್ನೈ: ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಕೊರೋನಾ ಸೋಂಕು ತಗುಲಿ ಅಸ್ವಸ್ಥರಾಗಿ 14 ದಿನಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದು ಶ್ವಾಸಕೋಶ ತೀವ್ರ ಹಾನಿಯಾಗಿದೆ. ಮೂರು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್ಪಿಬಿ ಅವರು ಇರುವ ವಾರ್ಡ್ ನಲ್ಲಿ ಅವರೇ ಹಾಡಿದ ಸಾಯಿಬಾಬಾ ಹಾಡುಗಳನ್ನು ಕೇಳಿಸುತ್ತಿದ್ದು, ಕೊಂಚ ಚೇತರಿಕೆ ಕಂಡುಬಂದಿದೆ. ಅವರು ಕಣ್ಣುಬಿಟ್ಟು ನೋಡಿದ್ದಾರೆ ಎನ್ನಲಾಗಿದೆ.
ನುರಿತ ವೈದ್ಯರ ತಂಡ ಎಸ್ಪಿಬಿ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಿದೆ. ನಿರಂತರ ಸಂಪರ್ಕದಲ್ಲಿದ್ದು ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಹೇಳಲಾಗಿದೆ.