ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘RRR’ ಮೊದಲ ದಿನದ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ.
ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ತೋರಿಸಿದ ನಂತರ ‘RRR’ ಚಿತ್ರಮಂದಿರಗಳಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯಿತು. ವಿಶ್ವದಾದ್ಯಂತ ಸುಮಾರು 10 ಸಾವಿರ ಸ್ಕ್ರೀನ್ ಗಳಲ್ಲಿ ತೆರೆ ಕಂಡಿದ್ದ ‘RRR’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಮಧ್ಯರಾತ್ರಿಯೇ ‘RRR’ ಪ್ರದರ್ಶನ ಆರಂಭವಾಗಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಿ, ಮಧ್ಯರಾತ್ರಿಯೇ ‘RRR’ ಪ್ರದರ್ಶನ ಆರಂಭವಾಗಿತ್ತು. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದಿದೆ.
500 ಕೋಟಿಗೂ ಹೆಚ್ಚು ಬಜೆಟ್‌ನಲ್ಲಿ ತಯಾರಾದ ಚಿತ್ರ ಮೊದಲ ದಿನ 250 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ವ್ಯಾಪಾರ ವಿಶ್ಲೇಷಕರು ಅಂದಾಜಿಸಿದ ಪ್ರಕಾರ, ಈ ಚಿತ್ರವು ಮೊದಲ ದಿನದಲ್ಲಿ ವಿಶ್ವಾದ್ಯಂತ ಸುಮಾರು 250 ಕೋಟಿ ರೂಪಾಯಿ ಗಳಿಸಿದೆ. ಪ್ರಭಾಸ್ ಅಭಿನಯದ ‘ಬಾಹುಬಲಿ2’ ಮೊದಲ ದಿನವೇ 100 ಕೋಟಿ ರೂ.ಗಳನ್ನು ಗಳಿಸಿತ್ತು.