ಪರೀಕ್ಷೆಯಲ್ಲಿ ಕಾಪಿ ಮಾಡಲು ಕೆಲವೊಂದು ಫಟಿಂಗ ವಿದ್ಯಾರ್ಥಿಗಳು ಏನೆಲ್ಲಾ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಕೆಲವೊಮ್ಮೆ ಪರೀಕ್ಷ ಮೇಲ್ವಿಚಾರಕರ ಕೈಯಲ್ಲಿ ನಕಲು ಮಾಡುತ್ತಾ ಸಿಕ್ಕಿ ಬೀಳುವ ವಿದ್ಯಾರ್ಥಿಗಳು ಅದೃಷ್ಟವಶಾತ್ ಯಾವುದೇ ಕಠಿಣ ಕ್ರಮ ಎದುರಿಸದೇ ಬಚಾವಾಗಿ ಬಿಡುತ್ತಾರೆ.
ಆದರೆ ಒಂದು ವೇಳೆ ಖುದ್ದು ಶಿಕ್ಷಕರೇ ಪರೀಕ್ಷೆಗೆ ಕೆಲ ದಿನಗಳು ಇರುವಾಗಲೇ ನಿಮಗೆ ಉತ್ತರಗಳನ್ನು ಕೊಟ್ಟುಬಿಟ್ಟರೆ? ಊಹಿಸಿಕೊಳ್ಳಲು ಕೊಂಚ ಕಷ್ಟ ಅಲ್ಲವೇ?
ವಿವಿಯೊಂದರ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ಅವರ ಪ್ರಾಧ್ಯಾಪಕರು ಪರೀಕ್ಷೆಗೆ ತಯಾರಿ ನಡೆಸಲೆಂದು ಕಳುಹಿಸಿದ ಪ್ರೆಸೆಂಟೇಷನ್ಗಳ ಫೋಲ್ಡರ್ಗಳ ಪೈಕಿ ಕೆಲವೊಂದು ಹೆಚ್ಚುವರಿ ಫೈಲ್ಗಳಣ್ನು ಕಳುಹಿಸಿದ್ದು, ’ಪರೀಕ್ಷಾ ಉತ್ತರಗಳು, ವಿದ್ಯಾರ್ಥಿಗಳಿಗೆ ಅಲ್ಲ’ ಎಂದು ಸೂಚ್ಯವಾಗಿಯೂ ಬರೆದಿದ್ದಾರೆ.
ಮಿಸ್ಟೇಕ್ ಆಗಿ ಅಟ್ಯಾಚ್ ಮಾಡಿದಂತೆ ಕಾಣುವ ಈ ಲಿಂಕ್ ಮೂಲಕ ಪ್ರಾಧ್ಯಾಪಕರು ತಮ್ಮ ವಿದ್ಯಾಥಿಗಳಿಗೆ ಟ್ರೋಲ್ ಮಾಡುವ ಐಡಿಯಾ ಮಾಡಿದ್ದರು. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ರಿಕ್ ಆಸ್ಟ್ಲೆರ ’ವೆಬರ್ ಗೋನಾ ಗಿವ್ ಯೂ ಅಪ್’ ಮ್ಯೂಸಿಕ್ ವಿಡಿಯೋ ಪ್ಲೇ ಆಗುತ್ತಿತ್ತು. ಶಿಕ್ಷಕರೂ ಸಹ ಪ್ರಾಂಕ್ ಮಾಡಬಹುದು ಎಂದು ತೋರಲು ತಾವು ಹೀಗೆ ಮಾಡಿದ್ದಾಗಿ ಪ್ರಾಧ್ಯಾಪಕರು ತಿಳಿಸಿದ್ದಾರೆ.