ಮುಂಬೈ: ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಬಾಲಿವುಡ್ ನಟ ದಿ. ಸುಶಾಂತ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ಅವರನ್ನು ಮುಂಬೈ ಮಾದಕದ್ರವ್ಯ ನಿಯಂತ್ರಣ ದಳ (ಎನ್ ಸಿಬಿ) ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಸುಶಾಂತ್ ಸಾವಿನ ನಂತರ ಉಂಟಾದ ಹಲವು ಕಾಂಟ್ರವರ್ಸಿಗಳ ಬಳಿಕ 28 ವರ್ಷದ ನಟಿ ರಿಯಾ ಬಂಧನವಾಗಿದೆ. ಅವರ ವಿರುದ್ಧ ಮಾದಕ ದ್ರವ್ಯ ನಿಷೇಧ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಈ ನಡುವೆ ಬಂಧನದ ವೇಳೆ ರಿಯಾ ಹಾಕಿದ್ದ ಟಿ ಶರ್ಟ್ ನ ಮೇಲೆ ಬರೆದ ವಾಕ್ಯಗಳು ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ರಿಯಾ ಚಕ್ರವರ್ತಿ ಹಾಗೂ ಆಕೆಯ ಟೀ ಶರ್ಟ್ ಮೇಲೆ ಬರೆದ ಪೆಟ್ರಿಯಾರ್ಕಿ ಪದದ ಅರ್ಥವನ್ನು ದೇಶದ ಗೋವಾದಿಂದ ಹಿಡಿದು ಉತ್ತರಾಖಂಡವರೆಗಿನ ಜನ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾರೆ.
“ರೋಸ್ ಆರ್ ರೆಡ್, ವಯೋಲೆಟ್ಸ್ ಆರ್ ಬ್ಲ್ಯೂ ಲೆಟ್ಸ್ ಸ್ಮ್ಯಾಷ್ ಪೆಟ್ರಿಯಾರ್ಕಿ ಯು ಆ್ಯಂಡ್ ಮಿ” ( ಗುಲಾಬಿಗಳು ಕೆಂಪು ನೇರಳೆಗಳು ನೀಲಿ, ನನ್ನ ನಿನ್ನ ನಡುವಿನ ಪ್ರಭುತ್ವವನ್ನು ತೊಡೆದು ಹಾಕಬೇಕಿದೆ) ಎಂದು ಆಕೆಯ ಟಿ ಶರ್ಟ್ ಮೇಲೆ ಬರೆಯಲಾಗಿದೆ.
ಟ್ವಿಟ್ಟರ್ ಬಳಕೆದಾರ ಅನುರಾಗ್ ಸಿನ್ಹಾ ಎಂಬುವವರು ರಿಯಾ ಫೋಟೋ ಹಾಕಿ “ರಿಯಾ ಎನ್ ಸಿಬಿ ಕಚೇರಿಗೆ ಬಂದಿದ್ದಾಳೆ. ಆಕೆಯ ಶರ್ಟ್ ಮೇಲಿರುವ ಅಹಂಕಾರದ ಸಂದೇಶದ ಅರ್ಥ ಹೇಳಿ” ಎಂದು ಬರೆದಿದ್ದಾರೆ. ಆದರೆ, ಮಹಿಳೆಯರು ಅನುರಾಗ್ ಅವರ ಮಾತನ್ನು ತೀವ್ರವಾಗಿ ವಿರೋಧಿಸಿದ್ದಾರೆ.
https://twitter.com/vsirnate/status/1303270620931784704?ref_src=twsrc%5Etfw%7Ctwcamp%5Etweetembed%7Ctwterm%5E1303270620931784704%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Frhea-chakraborty-wore-a-smash-patriarchy-t-shirt-indians-want-to-know-what-it-means-2859457.html