ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಕೇಳಿ ಬಂದಿದ್ದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿ ಬಿ 35 ಜನರ ವಿರುದ್ಧ ಎನ್ ಡಿ ಪಿ ಎಸ್ ಕೋರ್ಟ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ.
ಎನ್ ಸಿ ಬಿ ಮುಂಬೈ ವಿಭಾಗದ ನಿರ್ದೇಶಕ ಸಂಜಯ್ ವಾಂಖಡೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಇದರಲ್ಲಿ ರಿಯಾ ಚಕ್ರವರ್ತಿ, ಸಹೋದರ ಶೋವಿಕ್ ಚಕ್ರವರ್ತಿ, ಸ್ಯಾಮ್ಯುಯಲ್ ಮಿರಾಂಡ ಹಾಗೂ ಮನೆಗೆಲಸದ ದೀಪೇಶ್ ಸಾವಂತ್ ಸೇರಿದಂತೆ 35 ಜನರ ಹೆಸರಿದೆ.
ಆರೋಪ ಪಟ್ಟಿಯಲ್ಲಿರುವ 35 ಜನರ ಪೈಕಿ 5 ಜನ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.