ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿಗೆ ಜಾಮೀನು ಸಿಕ್ಕಿದೆ. ರಿಯಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಜಾಮೀನು ನೀಡಿದೆ. ಕಳೆದ ಒಂದು ತಿಂಗಳಿಂದ ಜೈಲಿನಲ್ಲಿ ಬಂಧಿಯಾಗಿದ್ದ ರಿಯಾ ಜಾಮೀನು ಅರ್ಜಿಯನ್ನು ಕೆಳ ನ್ಯಾಯಾಲಯ ಎರಡು ಬಾರಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ರಿಯಾ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಳು. ಈಗ ರಿಯಾಗೆ ಜಾಮೀನು ಸಿಕ್ಕಿದ್ದು, ಒಂದು ತಿಂಗಳ ನಂತ್ರ ರಿಯಾ ಜೈಲಿನಿಂದ ಹೊರಗೆ ಬರ್ತಿದ್ದಾಳೆ.
ಈ ಮಧ್ಯೆ ರಿಯಾ ಸಹೋದರ ಶೋವಿಕ್ ಚಕ್ರವರ್ತಿ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಅಬ್ದುಲ್ ಬಸೀತ್, ದೀಪೇಶ್ ಸಾವಂತ್, ಸ್ಯಾಮ್ಯುಯೆಲ್ ಜಾಮೀನು ಅರ್ಜಿಯನ್ನೂ ಕೋರ್ಟ್ ತಿರಸ್ಕರಿಸಿದೆ.
ನ್ಯಾಯಾಲಯದ ವಿಚಾರಣೆ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಯಿತು. ತಕ್ಷಣವೇ ಕೋರ್ಟ್ ತೀರ್ಪು ನೀಡಿದೆ. ರಿಯಾ ಚಕ್ರವರ್ತಿಗೆ 1 ಲಕ್ಷ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ಸಿಕ್ಕಿದೆ. ರಿಯಾ, ಪಾಸ್ಪೋರ್ಟನ್ನು ಕೋರ್ಟ್ ಗೆ ನೀಡಬೇಕು. ಮುಂಬೈನಿಂದ ಹೊರ ಹೋಗಲು ನ್ಯಾಯಾಲಯದ ಅನುಮತಿ ಪಡೆಯಬೇಕಾಗಿದೆ. ವಿಚಾರಣೆಗೆ ಕರೆದಾಗ ರಿಯಾ ಪೊಲೀಸ್ ಮುಂದೆ ಹಾಜರಾಗಬೇಕಿದೆ. ರಿಯಾಗೆ ಜಾಮೀನು ನೀಡುವುದನ್ನು ವಿರೋಧಿಸಿದ್ದ ಎನ್ ಸಿ ಬಿ ರಿಯಾ ಡ್ರಗ್ಸ್ ಸಿಂಡಿಕೇಟ್‌ನ ಸಕ್ರಿಯ ಸದಸ್ಯೆ ಎಂದಿದ್ದರು.