ನಿರ್ದೇಶಕ ಹಾಗೂ ನೃತ್ಯ ಸಂಯೋಜಕ ರೆಮೋ ಡಿಸೋಜಾಗೆ ಹೃದಯಾಘಾತವಾಗಿದೆ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ರೆಮೋ ಡಿಸೋಜಾರನ್ನ ದಾಖಲಿಸಲಾಗಿದೆ. ರೆಮೋಗೆ ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಬಾಲಿವುಡ್ನ ಪ್ರಸಿದ್ಧ ನೃತ್ಯ ಸಂಯೋಜಕರಲ್ಲೊಬ್ಬರಾಗಿರುವ ರೆಮೋ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ‘ಬಾಜಿರಾವ್ ಮಸ್ತಾನಿ’ ಸಿನಿಮಾದ ದಿವಾನಿ ಮಸ್ತಾನಿ ಹಾಡಿನ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಸ್ಟ್ರೀಟ್ ಡ್ಯಾನ್ಸರ್ 3ಡಿ’, ‘ಎಬಿಸಿಡಿ’, ‘ಎಬಿಸಿಡಿ 2’ ಹಾಗೂ ‘ಫ್ಲೈಯಿಂಗ್ ಜಾಟ್’ ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ . ‘ಲಾಲ್ ಪಹರೆರ್ ಕಥಾ’ ಸಿನಿಮಾದ ಮೂಲಕ ಬಂಗಾಳಿ ಚಿತ್ರರಂಗದಲ್ಲೂ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.