ಶಾರುಖ್ ಖಾನ್, ಸುಶ್ಮಿತಾ ಸೇನ್, ಸುನೀಲ್ ಶೆಟ್ಟಿ, ಜ಼ಾಯೆದ್ ಖಾನ್ ಮತ್ತು ಅಮೃತಾ ರಾವ್ ಅಭಿನಯದ ’ಮೈ ಹೂ ನಾ’ ಚಿತ್ರ 2004ರಲ್ಲಿ ಬಿಡುಗಡೆಯಾದರೂ ಇಂದಿಗೂ ಸಹ ಅಭಿಮಾನಿಗಳು ಇಷ್ಟ ಪಟ್ಟು ನೋಡುತ್ತಾರೆ.
ಚಿತ್ರದ ಪ್ರತಿಯೊಂದು ದೃಶ್ಯವನ್ನೂ ನೆನಪಿಟ್ಟುಕೊಳ್ಳುವ ಅಭಿಮಾನಿಗಳೂ ಇದ್ದಾರೆ. ಇವರ ಪೈಕಿ ಒಬ್ಬರಾದ ನೆಟ್ಟಿಗೊಬ್ಬರು ಚಿತ್ರದ ಕೊನೆಯ ಭಾಗದಲ್ಲಿ, ಚಿತ್ರ ನಿರ್ಮಾಣಕ್ಕಾಗಿ ದುಡಿದ ಮಂದಿಯ ಪರಿಚಯ ಕೊಡುವ ಭಾಗದ ವಿಶೇಷತೆಯೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಚಿತ್ರದ ಎಂಡ್ ಕ್ರೆಡಿಟ್ ಸಂದರ್ಭದಲ್ಲಿ ’ಯೇ ಫಿಜ಼ಾಯೇನ್’ ಹಾಡಿಗೆ ಚಿತ್ರತಂಡದ ಅಷ್ಟೂ ಮಂದಿ ಬಂದು ಸ್ಟೆಪ್ ಹಾಕುತ್ತಾರೆ.
ಇದೀಗ ಈ ದೃಶ್ಯ ಮತ್ತೊಮ್ಮೆ ವೈರಲ್ ಆಗಿದೆ. ಈ ದೃಶ್ಯದಲ್ಲಿ ಕಂಡು ಬರುವ ಸುದ್ದಿಪತ್ರಿಕೆಯ ಕ್ಲಿಪ್ಪಿಂಗ್ ಒಂದರ ಕ್ಲೋಸ್ ಲುಕ್ ವೈರಲ್ ಆಗಿದೆ. ಕಾಲ್ಪನಿಕವಾದ ಈ ಸುದ್ದಿಪತ್ರಿಕೆಯಲ್ಲಿ ಹಾಗೇ ಸುಮ್ಮನೇ ಒಂದಷ್ಟು ಪದಗಳನ್ನು ಬರೆಯಲಾಗಿದೆ. ಆದರೆ ಇಲ್ಲೂ ಒಂದು ಟ್ವಿಸ್ಟ್ ಇರುವ ಸಂಗತಿ ಲೇಟೆಸ್ಟ್ ಆಗಿ ಕಂಡು ಬಂದಿದೆ.
ಅಲ್ಲೊಂದು ಅಂಕಣವಿದ್ದು, ಅದನ್ನು ಬರೆದಿರುವ ವ್ಯಕ್ತಿಗೆ ತಾನೇಕೆ ಅದನ್ನು ಬರೆಯುತ್ತಿರುವೆ ಎಂದು ಗೊತ್ತಿಲ್ಲದ ಕಾರಣ ಸುಮ್ಮನೇ ಹಂಗೇ ಬರೆಯುತ್ತಿರುವಾಗಿ ಹೇಳಿಕೊಂಡು ಹೇಗೋ ಪದಗಳನ್ನು ತುಂಬಿಸಿದ್ದಾರೆ. ಇದೀಗ ಆ ಸೀನ್ ಅನ್ನು ಪಾಸ್ ಮಾಡಿ, ಜ಼ೂಮ್ ಮಾಡಿ ನೋಡಿದಾಗ ಈ ಫನ್ನಿ ಸಂಗತಿ ತಿಳಿದುಬಂದಿದೆ.