![](https://kannadadunia.com/wp-content/uploads/2023/11/garadi.png)
ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಈ ವಾರ ತೆರೆ ಕಾಣಲಿದೆ. ಗರಡಿ ಮನೆ, ಅದರ ಮಹತ್ವ ಹಿನ್ನೆಲೆಯಾಗಿಟ್ಟುಕೊಂಡು ಸಿನಿಮಾ ನಿರ್ಮಿಸಲಾಗಿದೆ. ಸೋನಲ್ ಮತ್ತು ಸೂರ್ಯ ಅವರ ನಡುವಿನ ಪ್ರೇಮಕಥೆಯೂ ಚಿತ್ರದಲ್ಲಿದೆ. ಅಲ್ಲದೇ, ಗುರು -ಶಿಷ್ಯರ ಬಾಂಧವ್ಯ ಕೂಡ ಚಿತ್ರದಲ್ಲಿದೆ.
ಬಿ.ಸಿ. ಪಾಟೀಲ್ ಅವರು ಗುರುವಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದಾರೆ. ನಿಶ್ವಿಕಾ ನಾಯ್ಡು, ಸುಜಯ್ ಬೇಲೂರು, ಧರ್ಮಣ್ಣ ಕಡೂರು, ಸಾಗರ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಧೂಳೆಬ್ಬಿಸುತ್ತಿದ್ದು, ಶುಕ್ರವಾರ ಸಿನಿಮಾ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರಿಸುತ್ತಿದ್ದಾರೆ.