ಗಣತಂತ್ರೋತ್ಸವದಂದು ಭಾರೀ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ ಸಂಬಂಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಪಂಜಾಬಿ ನಟ ದೀಪ್ ಸಿಧು ವಿರುದ್ಧ ಆರೋಪ ಪಟ್ಟಿ ದಾಖಲಿಸಿದ್ದಾರೆ.
ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜವನ್ನೇ ಕಿತ್ತು ಧಾರ್ಮಿಕ ಧ್ವಜ ಹಾರಿಸಿದ ಪ್ರತಿಭಟನಾಕಾರರ ನಡುವೆ ದೀಪ್ ಕಾಣಿಸಿಕೊಂಡಿದ್ದರು. ಪಂಜಾಬಿನ ಮುಕ್ತ್‌ಸರ ಜಿಲ್ಲೆಯ ಸಿಧು, ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮಂದಿಯನ್ನು ಸಮರ್ಥಿಸಿಕೊಂಡಿದ್ದರು. ಬಿಜೆಪಿ ಸಂಸದ ಸನ್ನಿ ಡಿಯೋಲ್‌ರ ಆಪ್ತರಾಗಿದ್ದ ಸಿಧು, ಕಳೆದ ಡಿಸೆಂಬರ್‌ನಿಂಧ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಲೇ ಅವರನ್ನು ಬಾಲಿವುಡ್‌ನ ಹಿರಿಯ ನಟ ದೂರ ಇಟ್ಟಿದ್ದರು.
ಕೆಂಪು ಕೋಟೆ ಬಳಿ ನಡೆದ ಹಿಂಸಾಚಾರಕ್ಕೆ ಕಾರಣನಾದ ದೀಪ್ ಸಿಧು ಹಿನ್ನಲೆ ಏನು…? ಇಲ್ಲಿದೆ ಮಾಹಿತಿ
“ನನ್ನ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದ್ದು, ಲುಕ್‌ಔಟ್ ನೊಟೀಸ್ ಸಹ ಹೊರಡಿಸಲಾಗಿದೆ. ನಾನು ತನಿಖೆಯಲ್ಲಿ ಭಾಗಿಯಾಗುತ್ತೇನೆ ಎಂದು ಮೊದಲಿಗೆ ಸಂದೇಶ ಕೊಡಲು ಇಚ್ಛಿಸುತ್ತೇನೆ” ಎಂದು 36 ವರ್ಷದ ಈ ನಟ ತಿಳಿಸಿದ್ದಾರೆ.