![Ravi Teja, Shruti Haasan's ''Krack'' set for Sankranti release | Telugu Movie News - Times of India](https://static.toiimg.com/thumb/msid-78884328,width-1280,height-720,resizemode-4/78884328.jpg)
2021 ಜನವರಿ 9 ರಂದು ತೆರೆ ಕಂಡು ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಬಾಕ್ಸಾಫೀಸ್ ಧೂಳಿಪಟ ಮಾಡಿದ್ದ ರವಿತೇಜ ಅಭಿನಯದ ‘ಕ್ರಾಕ್’ ಚಿತ್ರ ಬಿಡುಗಡೆಯಾಗಿ ಇಂದಿಗೆ ಮೂರು ವರ್ಷವಾಗಿದೆ. ಈ ಸಂತಸವನ್ನು ಚಿತ್ರತಂಡ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ.
ಆಕ್ಷನ್ ಡ್ರಾಮಾ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ಮಾಸ್ ಮಹಾರಾಜ ರವಿ ತೇಜ ಜೊತೆ ಶೃತಿ ಹಾಸನ್ ನಾಯಕಿಯಾಗಿ ಅಭಿನಯಿಸಿದ್ದು, ವರಲಕ್ಷ್ಮಿ ಶರತ್ ಕುಮಾರ್, ರವಿಶಂಕರ್, ಚಿರಾಗ್ ಜಾನಿ, ಜೀವಾ, ಸಪ್ತಗಿರಿ, ಮಹೇಶ್ ಕತ್ತಿ, ದೇವಿ ಪ್ರಸಾದ್, ಸುಧಾಕರ್ ತೆರೆ ಹಂಚಿಕೊಂಡಿದ್ದಾರೆ. ಗೋಪಿಚಂದ್ ಮಲಿನೇನಿ ನಿರ್ದೇಶನದ ಈ ಚಿತ್ರಕ್ಕೆ ತಮನ್ ಎಸ್ ಎಸ್ ಸಂಗೀತ ಸಂಯೋಜನೆ ನೀಡಿದ್ದು, ನವೀನ್ ನೂಲಿ ಸಂಕಲನವಿದೆ.
![](https://kannadadunia.com/wp-content/uploads/2024/01/48f7de7c-2a60-4b47-91ec-44dbe344ad70-400x531.jpg)