90 ರ ದಶಕದ ಬಾಲಿವುಡ್ ನಟಿಯರ ಪಟ್ಟಿಯಲ್ಲಿ ರವೀನಾ ಟಂಡನ್ ಹೆಸರು ಕೇಳಿ ಬರುತ್ತೆ. ನಟನೆ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸೆಳೆದ ನಟಿ ರವೀನಾ ದಾರಿ ಸುಗಮವಾಗಿರಲಿಲ್ಲ. ಯಾಕೆ ಏಕಾಏಕಿ ಪ್ರಸಿದ್ಧಿ ಪಡೆಯಲಿಲ್ಲ ಎಂಬುದನ್ನು ರವೀನಾ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ರವೀನಾ, ನನ್ನ ಯಶಸ್ಸಿನ ದಾರಿ ಸುಗಮವಾಗಿರಲಿಲ್ಲ. ಯಾಕೆಂದ್ರೆ ನಾನು ಹೀರೋಗಳ ಜೊತೆ ಮಲಗಿರಲಿಲ್ಲ ಎಂದಿದ್ದಾರೆ. ಇದ್ರ ಜೊತೆ ಪತ್ರಿಕೋದ್ಯಮದ ಬಗ್ಗೆ ಅನೇಕ ಆಘಾತಕಾರಿ ವಿಷಯಗಳನ್ನು ಹೇಳಿದ್ದಾರೆ.
ಗಾಡ್ ಫಾದರ್ ಇಲ್ಲದ ರವೀನಾ ಯಾವುದೇ ಟೀಂನ ಭಾಗವಾಗಿರಲಿಲ್ಲವಂತೆ. ಯಾವುದೇ ನಾಯಕನ ಜೊತೆ ಸಂಬಂಧವಿಟ್ಟುಕೊಂಡಿರಲಿಲ್ಲವಂತೆ. ನಾಯಕರು ಹೇಳಿದಂತೆ ಮಾಡುತ್ತಿರಲಿಲ್ಲವಂತೆ. ಅವರಿಗೆ ಸೂಕ್ತವೆನಿಸಿದ್ದನ್ನು ಮಾಡ್ತಿದ್ದರಂತೆ. ಇದೇ ಕಾರಣಕ್ಕೆ ಅವರನ್ನು ಕೆಲವರು ದೂರವಿಟ್ಟಿದ್ದರಂತೆ. ಕೆಲ ಮಹಿಳಾ ಪತ್ರಕರ್ತೆಯರು ಅವರ ಬಗ್ಗೆ ಸಾಕಷ್ಟು ಕೆಟ್ಟದಾಗಿ ಬರೆದಿದ್ದರಂತೆ.