ಜನಪ್ರಿಯ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಮುದ್ದಾದ ಪುಟಾಣಿಗಳು ಇವತ್ತಿಗೂ ಜನರ ಮನಸ್ಸಿನಿಂದ ಮಾಸಿಲ್ಲ. ಧಾರಾ ಜಾಹೀರಾತಿನ ಜಿಲೇಬಿ, ರಸ್ನಾ ಗರ್ಲ್ ಅನ್ನು ಇವತ್ತಿಗೂ ಜನರು ನೆನಪಿಸಿಕೊಳ್ತಾರೆ. 90ರ ದಶಕದಲ್ಲಿ ಜಾಹೀರಾತುಗಳ ಮೂಲಕವೇ ಈ ಪುಟ್ಟ ಕಲಾವಿದರು ಮಿಂಚಿದ್ದರು.
ಧಾರಾ ಜಾಹೀರಾತಿನಲ್ಲಿ ಪುಟ್ಟ ಬಾಲಕನ ಅಭಿನಯವನ್ನು ಮೆಚ್ಚಿಕೊಳ್ಳದವರೇ ಇಲ್ಲ. ಈ ಜಾಹೀರಾತಿನಲ್ಲಿ ಜಿಲೇಬಿಯಿಂದ್ಲೇ ಫೇಮಸ್ ಆಗಿದ್ದ ಬಾಲಕ, ಕುಚ್ ಕುಚ್ ಹೋತಾ ಹೈ ಸಿನೆಮಾದಲ್ಲೂ ಅಭಿಮಾನಿಗಳನ್ನು ಸೆಳೆದಿದ್ದ.
ಮುದ್ದಾಗಿರೋ ಅಮುಲ್ ಗರ್ಲ್ ಕೂಡ ಎಲ್ಲರಿಗೂ ಅಚ್ಚುಮೆಚ್ಚು. 1967ರಲ್ಲೇ ಸಿದ್ಧವಾಗಿದ್ದ ಅಮುಲ್ ಕಂಪನಿಯ ಜಾಹೀರಾತು ಇಂದಿಗೂ ಚಿರಪರಿಚಿತ. ಫನ್ನಿ ಜಾಹೀರಾತುಗಳಲ್ಲಿ ಆನಿಮೇಟೆಡ್ ಗರ್ಲ್ ಹೆಸರು ಮಾಡಿದ್ದಾಳೆ.
ಕೊಂಪ್ಲಾನ್ ಬಾಯ್ & ಗರ್ಲ್ ಬಗ್ಗೆ ನಿಮಗೂ ಗೊತ್ತಿರಬೇಕು. ಈ ಜಾಹೀರಾತಿನ ಮೂಲಕವೇ ನಟ ಶಾಹಿದ್ ಕಪೂರ್ ಹಾಗೂ ನಟಿ ಆಯೇಷಾ ಟಾಕಿಯಾ ಬಾಲಿವುಡ್ ಪ್ರವೇಶಿಸಿದ್ದರು.
ಮಾರುತಿ ಸುಜುಕಿ ಜಾಹೀರಾತಿನಲ್ಲಿ ಸಿಖ್ ಬಾಲಕನ ಪಾತ್ರ ಮಾಡಿದ್ದ ಮುದ್ದಾದ ಮಗು ಕೂಡ ಜನರ ಮನಗೆದ್ದಿತ್ತು. ಪುಟ್ಟ ಆಟಿಕೆ ಕಾರು ಹಿಡಿದು ಅವನು ಮಾಡೋ ತುಂಟಾಟವೇ ಜಾಹೀರಾತಿನ ಹೈಲೈಟ್ ಆಗಿತ್ತು.
ಹುಳಿ-ಸಿಹಿ ಮಿಶ್ರಿತ ಕ್ಯಾಂಡಿಮ್ಯಾನ್ ಚಾಕಲೇಟ್ ಈಗಲೂ ಬಾಯಲ್ಲಿ ನೀರೂರಿಸುತ್ತದೆ. ಇದರ ಜಾಹೀರಾತು ಕೂಡ ಸಖತ್ ಫನ್ನಿಯಾಗಿತ್ತು.
ಇನ್ನು ರಸ್ನಾ ಜಾಹೀರಾತನ್ನಂತೂ ಯಾರು ಮರೆಯೋಕೆ ಸಾಧ್ಯವಿಲ್ಲ. ಐ ಲವ್ ಯೂ ರಸ್ನಾ ಅಂತಾ ಮುದ್ದಾಗಿ ಹೇಳೋ ಪುಟಾಣಿ ಇನ್ನೂ ಕಣ್ಮುಂದೆ ಬರ್ತಾಳೆ.
ಇನ್ನು ಆ್ಯಕ್ಷನ್ ಕಂಪನಿಯ ಶೂ ಜಾಹೀರಾತು ಕೂಡ ಸಾಕಷ್ಟು ಸುದ್ದಿ ಮಾಡಿತ್ತು.
ದೂರದರ್ಶನದಲ್ಲಿ ಪ್ರಸಾರವಾಗ್ತಿದ್ದ ಕ್ಲಾಸಿಕ್ ಟೂತ್ ಬ್ರಶ್ ಜಾಹೀರಾತನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳಿ.
ಪೂರಿಯ ಮೇಲೆಲ್ಲ ಓಡಾಡೋ ಸನ್ ಡ್ರಾಪ್ ಎಣ್ಣೆ ಜಾಹೀರಾತಿನ ಪುಟಾಣಿ ಕೂಡ ಸಖತ್ ಕ್ಯೂಟಾಗಿ ಕಾಣಿಸಿಕೊಂಡಿದ್ದ.
ಸರ್ಫ್ ಎಕ್ಸೆಲ್ ಜಾಹೀರಾತಂತೂ ಮಕ್ಕಳ ಫೇವರಿಟ್. ಅಣ್ಣ-ತಂಗಿಯ ಬಾಂಧವ್ಯಕ್ಕೆ ಸಾಕ್ಷಿಯಂತಿತ್ತು ಈ ಜಾಹೀರಾತು.