ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ಯಶ್ ಅವರು ಅವರನ್ನು ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ ತಾರೆಯರೆಂದು ‘ಫೋರ್ಬ್ಸ್’ ನಿಯತಕಾಲಿಕ ತಿಳಿಸಿದೆ.
ಇದು ಸ್ಯಾಂಡಲ್ ವುಡ್ ಚಲನಚಿತ್ರ ತಾರೆಯರಾದ ರಶ್ಮಿಕಾ, ಯಶ್ ಮತ್ತು ಕಿಚ್ಚ ಸುದೀಪ್ ಅವರು ಪ್ಯಾನ್-ಇಂಡಿಯನ್ ಸಿನಿಮಾ ದಾಪುಗಾಲು ಇಡುತ್ತಿರುವುದರ ಕುರಿತ ದಿಕ್ಸೂಚಿಯಾಗಿದೆ. ಟಾಲಿವುಡ್ ನ ಸಮಂತಾ ರುತ್ ಪ್ರಭು 4ನೇ ಸ್ಥಾನದಲ್ಲಿದ್ದರೆ, ನಟ ಅಲ್ಲು ಅರ್ಜುನ್ ಅವರು 5ನೇ ಸ್ಥಾನದಲ್ಲಿದ್ದಾರೆ.
ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಲನಚಿತ್ರೋದ್ಯಮದ ಸೆಲೆಬ್ರಿಟಿಗಳು ಹಂಚಿಕೊಂಡ ಪೋಸ್ಟ್‌ಗಳು ಮತ್ತು ವಿಡಿಯೋಗಳಿಂದ ಪಡೆದ ವೀಕ್ಷಣೆಗಳು, ಲೈಕ್ ಗಳು ಮತ್ತು ಕಾಮೆಂಟ್‌ಗಳನ್ನು ಆಧರಿಸಿ ಈ ಶ್ರೇಯಾಂಕಗಳನ್ನು ನೀಡಲಾಗಿದೆ.
ರಶ್ಮಿಕಾ, ಅವರ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಮುಂಬರುವ ಚಲನಚಿತ್ರಗಳ ಬಗ್ಗೆ ಪೋಸ್ಟ್ ಹಂಚಿಕೊಳ್ಳುತ್ತಾರೆ. ಯಶ್, ‘ಕೆಜಿಎಫ್’ ಸೀಕ್ವೆಲ್‌ನಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕುಟುಂಬದ ಸಂಭ್ರಮಾಚರಣೆಯ ಫೋಟೋಗಳು, ಪ್ರವಾಸಗಳು ಮತ್ತು ಚಲನಚಿತ್ರ ಯೋಜನೆಗಳನ್ನು ಪೋಸ್ಟ್ ಮಾಡುತ್ತಾರೆ.
ಈ ಇಬ್ಬರೂ ತಾರೆಯರು ಕನ್ನಡ ಚಿತ್ರರಂಗದ ಹೆಜ್ಜೆ ಗುರುತನ್ನು ಮಾರುಕಟ್ಟೆಯನ್ನು ಮೀರಿ ವಿಸ್ತರಿಸಿ ಬೆಳೆಯುತ್ತಿರುವುದು ನಿಜಕ್ಕೂ ಸಂತೋಷದ ವಿಷಯವಾಗಿದೆ.

