
ಕಳೆದೆರಡು ದಿನಗಳಿಂದ ನ್ಯಾಷನಲ್ ಕ್ರಶ್ ಎಂಬ ಬಿರುದಾಂಕಿತೆಯಾಗಿರುವ ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಲಾತಾಣಗಳಲ್ಲಿ ಸಖತ್ ಸುದ್ದಿ ಮಾಡುತ್ತಿದ್ದಾರೆ.
ಖುದ್ದು ಗೂಗಲ್ ರಶ್ಮಿಕಾಳನ್ನು ’ನ್ಯಾಷನಲ್ ಕ್ರಶ್’ ಎಂದು ಘೋಷಿಸಿದೆ ಎಂಬ ಮಟ್ಟಿಗೆ ಸುಳ್ಳಿನ ಸುದ್ದಿಗಳನ್ನು ಹಬ್ಬಿಸಿಬಿಟ್ಟಿದ್ದಾರೆ ಪ್ರಚಾರ ದಾಹಿಗಳು. ಆದರೆ ವಾಸ್ತವ ಏನಪ್ಪಾ ಅಂದ್ರೆ, ಆಕೆಯ ಅಭಿಮಾನಿಯೊಬ್ಬರು ’ನ್ಯಾಷನಲ್ ಕ್ರಶ್’ ಹೆಸರಿನಲ್ಲಿ ಪಿನ್ ಟ್ರೆಸ್ಟ್ ಬೋರ್ಡ್ ಒಂದನ್ನು ಕ್ರಿಯೇಟ್ ಮಾಡಿದ್ದರು. ಈ ಕಾರಣದಿಂದ ಗೂಗಲ್‌ನಲ್ಲಿ ’ನ್ಯಾಷನಲ್ ಕ್ರಶ್’ ಎಂದು ಟೈಪ್ ಮಾಡಿದಾಗೆಲ್ಲಾ ರಶ್ಮಿಕಾ ಮುಖ ಕಾಣುತ್ತಿತ್ತು.
ಇದಕ್ಕೆ ಖುದ್ದು ಪ್ರತಿಕ್ರಿಯಿಸಿರುವ ರಶ್ಮಿಕಾ, “ವಾಹ್…! ನನ್ನ ಜನರು ನಿಜಕ್ಕೂ ಲೆಜೆಂಡರಿ, ಇವರೆಲ್ಲಾ ಬಹಳ ಕ್ಯೂಟ್…..ಅಲ್ಲವೇ ? ಅವರೆಲ್ಲಾ ನನ್ನ ಹೃದಯ” ಎಂದು ಟ್ವೀಟ್ ಮಾಡಿದ್ದಾರೆ.