
ಬಹಳಷ್ಟು ಲಲನೆಯರ ಪಾಲಿನ ಡ್ರೀಮ್ ಬಾಯ್ ಆಗಿರುವ ರಣಬೀರ್ ಕಪೂರ್ ಇತ್ತೀಚೆಗೆ ನಟಿ ಆಲಿಯಾ ಭಟ್ ಜೊತೆಗೆ ಡೇಟಿಂಗ್ ಮಾಡುತ್ತಿರುವ ಸಾಕಷ್ಟು ಸುದ್ದಿಗಳ ಮೂಲಕ ಸದ್ದು ಮಾಡುತ್ತಿದ್ದಾರೆ.
ಇತ್ತೀಚೆಗೆ ಪ್ರರ್ತಕರ್ತ ರಾಜೀವ್ ಮಸಂದ್ ಜೊತೆಗೆ ಮಾತನಾಡಿದ ರಣಬೀರ್ ಕಪೂರ್ ತಮ್ಮ ಮುಂಬರು ಪ್ರಾಜೆಕ್ಟ್‌ಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಲಾಕ್‌ಡೌನ್ ಅವಧಿಯಲ್ಲಿ ತಾವು ಏನನ್ನು ಬಹುವಾಗಿ ಮಿಸ್ ಮಾಡಿಕೊಳ್ಳುತ್ತಿರುವೆ ಎಂದು ರಣಬೀರ್ ಹೇಳಿರುವುದು ಸಖತ್ ಸುದ್ದಿಯಲ್ಲಿದೆ.
“ನಾನು ಸಿರಿವಂತ ವರ್ಗದಲ್ಲಿರುವ ಕಾರಣ ಮನೆಯಲ್ಲಿ ಕುಳಿತು ಆರಾಮವಾಗಿ ಕಾಲ ಕಳೆಯಬಹುದಾಗಿದೆ. ಆದರೆ ಜಗತ್ತಿನಲ್ಲಿ ಈ ಸೋಂಕಿನ ಕಾರಣದಿಂದ ಬಹಳ ಕಷ್ಟಪಡುತ್ತಿರುವ ಮಂದಿ ಬಹಳಷ್ಟು ಇರುವಾಗ ನನಗೆ ಈ ಪ್ರಶ್ನೆ ಕೇಳಿರುವುದು ಸಮಂಜಸವಲ್ಲ ಎಂದು ನನಗೆ ಅನಿಸುತ್ತದೆ,” ಎಂದು ರಣಬೀರ್ ಉತ್ತರಿಸಿದ್ದಾರೆ.
ರಣಬೀರ್‌ರ ಈ ಪ್ರೌಢಿಮೆಯ ಉತ್ತರ ನೆಟ್ಟಿಗರಿಂದ ಬಹಳ ಪ್ರಶಂಸೆಗೆ ಪಾತ್ರವಾಗಿದೆ.