
‘ಬಾಹುಬಲಿ’ ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಅವರ ಮದುವೆಗೆ ಕ್ಷಣಗಣನೆ ಶುರುವಾಗಿದೆ.
ತೆಲುಗು ಚಿತ್ರರಂಗದ ದೊಡ್ಡ ಮನೆತನಕ್ಕೆ ಸೇರಿದ ರಾಣಾ ದಗ್ಗುಬಾಟಿ ಮದುವೆ ವೈಭವದಿಂದ ನಡೆಯಬೇಕಿತ್ತು. ಆದರೆ, ಕೊರೋನಾ ಕಾರಣದಿಂದ ಕೆಲವೇ ಜನರ ಸಮ್ಮುಖದಲ್ಲಿ ಮದುವೆ ನೆರವೇರಲಿದೆ. ರಾಣಾ ದಗ್ಗುಬಾಟಿ ಅವರ ತಾತ ಡಿ. ರಾಮಾನಾಯ್ಡು ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದು, ಸುರೇಶ್ ಪ್ರೋಡಕ್ಷನ್ಸ್ ಮೂಲಕ ಅನೇಕ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ.
ರಾಣಾ ಅವರ ತಂದೆ ಸುರೇಶ್ ಬಾಬು ಸುರೇಶ್ ಪ್ರೋಡಕ್ಷನ್ಸ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ರಾಣಾ ಅವರ ಚಿಕ್ಕಪ್ಪ ವಿಕ್ಟರಿ ವೆಂಕಟೇಶ್ ತೆಲುಗಿನ ಖ್ಯಾತನಟರಲ್ಲಿ ಒಬ್ಬರಾಗಿದ್ದಾರೆ. ಕೊರೋನಾ ಕಾರಣದಿಂದ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಅವರ ಮದುವೆ ಸರಳವಾಗಿ ಕುಟುಂಬದ ಕೆಲವೇ ಕೆಲವು ಮಂದಿಯ ಸಮ್ಮುಖದಲ್ಲಿ ನೆರವೇರಲಿದೆ.
ಕೊರೊನಾ ಕಾರಣದಿಂದ ಮುನ್ನೆಚ್ಚರಿಕೆಯೊಂದಿಗೆ ಮದುವೆ ನೆರವೇರಿಸಲಾಗುತ್ತಿದೆ. ಖಾಸಗಿ ಸಮಾರಂಭದಲ್ಲಿ 30 ಮಂದಿ ಮಾತ್ರ ಭಾಗಿಯಾಗಲಿದ್ದಾರೆ. ಆಪ್ತ ಸ್ನೇಹಿತರನ್ನು ಕೂಡ ಮದುವೆಗೆ ಕರೆಯುತ್ತಿಲ್ಲ. ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಿಲ್ಲ. ಖಾಸಗಿ ಹೋಟೆಲ್ ನಲ್ಲಿ ಮದುವೆ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆಗಸ್ಟ್ 8 ರಂದು ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.