alex Certify ನಟಿ ಮಾಲಾಶ್ರೀ ಪತಿ ‘ಕೋಟಿ ನಿರ್ಮಾಪಕ ರಾಮು’ ನಿಧನಕ್ಕೆ ಚಿತ್ರರಂಗ ಕಂಬನಿ: ಇಂದು ಮಧ್ಯಾಹ್ನ ಅಂತ್ಯಸಂಸ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಮಾಲಾಶ್ರೀ ಪತಿ ‘ಕೋಟಿ ನಿರ್ಮಾಪಕ ರಾಮು’ ನಿಧನಕ್ಕೆ ಚಿತ್ರರಂಗ ಕಂಬನಿ: ಇಂದು ಮಧ್ಯಾಹ್ನ ಅಂತ್ಯಸಂಸ್ಕಾರ

ಬೆಂಗಳೂರು: ಅದ್ದೂರಿ ಚಿತ್ರಗಳ ನಿರ್ಮಾಣ ಮೂಲಕ ಹೆಸರಾಗಿದ್ದ, ‘ಕೋಟಿ ನಿರ್ಮಾಪಕ’ ಎಂದೇ ಖ್ಯಾತರಾಗಿದ್ದ ನಟಿ ಮಾಲಾಶ್ರೀ ಅವರ ಪತಿ ರಾಮು ಕೊರೋನಾದಿಂದ ಮೃತಪಟ್ಟಿದ್ದಾರೆ.

ಕಳೆದವಾರ ಸೋಂಕು ತಗಲಿದ ಅವರನ್ನು ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಇಂದು ಅಂತ್ಯಸಂಸ್ಕಾರ ನೆರವೇರಲಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೋಡಿಗೆಹಳ್ಳಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.

ಕೋಟಿ ರಾಮು ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಮಾಜಿ ಸಿಎಂ ಕುಮಾರಸ್ವಾಮಿ. ಸಂಸದೆ ಸುಮಲತಾ ಅಂಬರೀಶ್, ಶಿವರಾಜ್ ಕುಮಾರ್, ಪುನಿತ್ ರಾಜ್ ಕುಮಾರ್, ಗಣೇಶ್, ದರ್ಶನ್, ಸುದೀಪ್, ಜಗ್ಗೇಶ್, ದುನಿಯಾ ವಿಜಯ್, ಸಾ.ರಾ. ಗೋವಿಂದು, ಶ್ರೀಮುರಳಿ, ದೇವರಾಜ್ ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. 90ರ ದಶಕದಲ್ಲೇ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸಿದ ಅವರು ಕೋಟಿ ರಾಮು ಎಂದೇ ಹೆಸರಾಗಿದ್ದರು. ‘ಗೋಲಿಬಾರ್’, ‘ಲಾಕಪ್ ಡೆತ್’, ‘ಸಿಂಹದ ಮರಿ’, ‘ಎಕೆ 47’ ಸೇರಿದಂತೆ 37 ಸಿನಿಮಾ ನಿರ್ಮಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Pes vyhrabe díru: mýty Jak odstranit žluté skvrny z Potraviny, které by se neměly před vařením omývat: Nebezpečně jedovaté: Brambory, Káva na lačný žaludek: Ano nebo ne? Jak se zbavit hmyzu a žárlivých přítelkyň: 10