alex Certify ರಾಖಿ ಸಾವಂತ್​ ಪತಿಗೆ ಆಗಿದ್ಯಾ ಮತ್ತೊಂದು ಮದುವೆ..? ಡ್ರಾಮಾ ಕ್ವೀನ್‌ ಹೇಳಿದ್ದು ಕೇಳಿ ಸಹೋದರನಿಗೆ ‌ʼಶಾಕ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಖಿ ಸಾವಂತ್​ ಪತಿಗೆ ಆಗಿದ್ಯಾ ಮತ್ತೊಂದು ಮದುವೆ..? ಡ್ರಾಮಾ ಕ್ವೀನ್‌ ಹೇಳಿದ್ದು ಕೇಳಿ ಸಹೋದರನಿಗೆ ‌ʼಶಾಕ್ʼ

ಬಿಗ್​ ಬಾಸ್​ ಹಿಂದಿ ಆವೃತ್ತಿಯ ಸೀಸನ್​ 14ನ ವಿವಾದಿತ ಸ್ಪರ್ಧಿ ರಾಖಿ ಸಾವಂತ್​ ದಿನಕ್ಕೊಂದು ವಿಚಾರದಿಂದ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ತನ್ನ ಪತಿ ರಿತೇಶ್​ ವಿರುದ್ಧ ರಾಖಿ ಹೊಸ ಬಾಂಬ್​ ಎಸೆದಿದ್ದು ಈ ವಿಚಾರ ಕೇಳಿದ ರಾಖಿ ಸಾವಂತ್ ಸಹೋದರ ರಾಕೇಶ್​ ಶಾಕ್​ ಆಗಿದ್ದಾರೆ.

ಬಿಗ್​ ಬಾಸ್​ನ ಮತ್ತೊಬ್ಬ ಸ್ಪರ್ಧಿ ರಾಹುಲ್​ ವೈದ್ಯ ಜೊತೆ ಮಾತನಾಡುತ್ತಾ ರಾಖಿ ಸಾವಂತ್​ ನನ್ನ ಪತಿ ರಿತೇಶ್​​ಗೆ ಮತ್ತೊಂದು ಮದುವೆಯಾಗಿದೆ ಹಾಗೂ ಆತನಿಗೆ ಮಗು ಕೂಡ ಇದೆ ಎಂದು ಹೇಳಿದ್ದಾಳೆ.

ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ ರಾಖಿ ಸಾವಂತ್​ ಸಹೋದರ ರಾಕೇಶ್​, ರಾಖಿ ಸಾವಂತ್​​ಳ ಮಾತನ್ನ ಕೇಳಿ ನನಗೆ ಆಘಾತವಾಗಿದೆ. ನನ್ನ ತಾಯಿಗೂ ಕೂಡ ಈ ವಿಚಾರ ಗೊತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ರಾಖಿ ಸಾವಂತ್,​ ನನ್ನ ತಾಯಿ ರಿತೇಶ್​ ಮದುವೆ ವಿಚಾರ ತಿಳಿದೇ ಅನಾರೋಗ್ಯಕ್ಕೆ ಈಡಾಗಿದ್ದಾರೆ ಎಂದು ಹೇಳಿಕೊಂಡಿದ್ದರು.

ನಾನು ಈ ಸುದ್ದಿಯನ್ನ ಇದೇ ಮೊದಲ ಬಾರಿಗೆ ಕೇಳುತ್ತಿದ್ದೇನೆ. ನನಗೆ ಶಾಕ್​ ಆಗಿದೆ. ನನಗಾಗಲಿ ನನ್ನ ತಾಯಿಗಾಗಲಿ ರಿತೇಶ್​ ಭಾವ ಮದುವೆಯಾಗಿ ಒಬ್ಬ ಮಗನನ್ನ ಹೊಂದಿದ್ದಾರೆ ಎಂಬ ವಿಚಾರವೇ ಗೊತ್ತಿಲ್ಲ. ಅಲ್ಲದೇ ಈ ವಿಚಾರ ಸತ್ಯ ಕೂಡ ಆಗಿರಲಿಕ್ಕಿಲ್ಲ ಎಂದು ಹೇಳಿದ್ದಾರೆ.

2019ರಲ್ಲಿ ರಾಖಿ ಸಾವಂತ್​ ತಾನು ರಿತೇಶ್​ ಎಂಬವರ ಜೊತೆ ಮದುವೆಯಾಗಿರೋದಾಗಿ ಘೋಷಣೆ ಮಾಡಿದ್ದರು. ಆದರೆ ಇಲ್ಲಿಯವರೆಗೆ ರಾಖಿ, ರಿತೇಶ್​ ಯಾರು ಅನ್ನೋದನ್ನ ಬಹಿರಂಗಗೊಳಿಸಿಲ್ಲ. ಆದರೆ ಬಿಗ್​ ಬಾಸ್​ನಲ್ಲಿ ಆಕೆ ತಾನು ನಿಜವಾಗಿಯೂ ಮದುವೆಯಾಗಿದ್ದೇನೆ ಹಾಗೂ ಇದು ಪಬ್ಲಿಸಿಟಿಗಾಗಿ ಹಬ್ಬಿಸಿದ ಸುದ್ದಿಯಲ್ಲ ಎಂದೂ ಹೇಳಿದ್ದರು.

ಬಿಗ್​ ಬಾಸ್​​ ಶೋನ ಸ್ಪರ್ಧಿಯಾಗಿರುವ ರೂಬಿನಾ ಹಾಗೂ ಅಭಿನವ್​ ಶುಕ್ಲಾ ದಂಪತಿಗೆ ರಾಖಿ ಸಾವಂತ್​ ದೊಡ್ಡ ತಲೆನೋವಾಗಿದ್ದಾರೆ. ಅಭಿನವ್​ ಶುಕ್ಲಾ ಜೊತೆ ನನಗೆ ಪ್ರೀತಿಯಾಗಿದೆ ಎಂದು ಹೇಳಿಕೊಂಡು ತಿರುಗುತ್ತಿರುವ ರಾಖಿ ಸಖತ್​ ಫ್ಲರ್ಟ್​ ಮಾಡುತ್ತಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...