ಬಾಲಿವುಡ್ ನಟಿ ರಾಖಿ ಸಾವಂತ್ ಅಚ್ಚರಿಯ ವಿಷ್ಯವೊಂದನ್ನು ಹೇಳಿದ್ದಾಳೆ. ರಾಖಿ ಸಾವಂತ್ ಗೆ ಎಂದೂ ಕೊರೊನಾ ವೈರಸ್ ಕಾಡುವುದಿಲ್ಲವಂತೆ. ಇದಕ್ಕೆ ಕಾರಣವೇನು ಎಂಬುದನ್ನೂ ರಾಖಿ ಸಾವಂತ್ ಹೇಳಿದ್ದಾರೆ.
ಸೆಲೆಬ್ರಿಟಿ ಛಾಯಾಗ್ರಾಹಕ ವಿರಲ್ ಭಯಾನಿ, ರಾಖಿ ಸಾವಂತ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಖಿ ಅನೇಕ ವಿಷ್ಯಗಳನ್ನು ಮಾತನಾಡಿದ್ದಾಳೆ. ಉದ್ಯಮದ ಅನೇಕರಿಗೆ ಕೊರೊನ ಬಂದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾಳೆ. ದೇಶದ ಪರಿಸ್ಥಿತಿ ಬಗ್ಗೆ ಮಾತನಾಡುವ ರಾಖಿ ಬಿಕ್ಕಿ ಬಿಕ್ಕಿ ಅಳುತ್ತಾಳೆ.
ನಾನು ತುಂಬಾ ಅಳುತ್ತೇನೆ. ನಾನು ಅಸಹಾಯಕಳು. ನನಗೆ ಏನೂ ಮಾಡಲೂ ಸಾಧ್ಯವಾಗ್ತಿಲ್ಲ. ನಾನು ಲಸಿಕೆ ಪಡೆಯಲು ಬಯಸಿದ್ದೆ. ಆದ್ರೆ ನನಗೆ ಲಸಿಕೆ ಸಿಕ್ಕಿಲ್ಲ. ನನ್ನ ಲಸಿಕೆಯನ್ನು ಅಗತ್ಯವಿರುವ ಯಾರಿಗಾದರೂ ನೀಡಲಿ ಎಂದು ರಾಖಿ ಹೇಳಿದ್ದಾಳೆ. ಇಷ್ಟೇ ಅಲ್ಲ ನನಗೆ ಎಂದೂ ಕೊರೊನಾ ಬರುವುದಿಲ್ಲವೆಂದು ರಾಖಿ ಹೇಳಿದ್ದಾಳೆ. ನನ್ನಲ್ಲಿ ಯೇಸುವಿನ ಪವಿತ್ರ ರಕ್ತವಿದೆ. ಹಾಗಾಗಿ ನನಗೆ ಹಾಗೂ ನನ್ನ ಕುಟುಂಬಕ್ಕೆ ಕೊರೊನಾ ಬರುವುದಿಲ್ಲ. ನಾನು ಎಲ್ಲ ಕೆಟ್ಟ ಅಭ್ಯಾಸ ಬಿಟ್ಟಿದ್ದೇನೆ. ಕೋಪ ಮಾತ್ರ ಸ್ವಲ್ಪವಿದ್ದು, ಅದನ್ನು ಬಿಡುತ್ತೇನೆ. ನಾನು ದೇವರ ಮುಂದೆ ಶರಣಾಗಿದ್ದೇನೆ ಎಂದು ರಾಖಿ ಹೇಳಿಕೊಂಡಿದ್ದಾಳೆ.
ಸದಾ ಸುದ್ದಿಯಲ್ಲಿರುವ ಕಲಾವಿದರಲ್ಲಿ ರಾಖಿ ಒಬ್ಬಳು. ಒಂದಲ್ಲ ಒಂದು ಕಾರಣ ಹಾಕಿ ಸುದ್ದಿ ಮಾಡ್ತಿರುತ್ತಾಳೆ.