alex Certify ನಟ ರಾಜ್ ಕುಮಾರ್ ಹೆಸರಿನಲ್ಲಿ ವಂಚನೆ; ಸಾಲ ಪಡೆಯಲು ಪಾನ್ ಕಾರ್ಡ್ ದುರ್ಬಳಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ರಾಜ್ ಕುಮಾರ್ ಹೆಸರಿನಲ್ಲಿ ವಂಚನೆ; ಸಾಲ ಪಡೆಯಲು ಪಾನ್ ಕಾರ್ಡ್ ದುರ್ಬಳಕೆ

ತನ್ನ ಹೆಸರಿನಲ್ಲಿ ಸಾಲ ಪಡೆಯಲು ಪಾನ್ ಕಾರ್ಡ್ ದುರ್ಬಳಕೆ ಮಾಡಿಕೊಂಡಿದ್ದು, ವಂಚನೆಗೆ ಬಲಿಯಾಗಿದ್ದೇನೆ ಎಂದು ನಟ ರಾಜ್‌ ಕುಮಾರ್ ರಾವ್ ಹೇಳಿದ್ದಾರೆ. ಈ ವಂಚನೆಯಿಂದಾಗಿ, ಅವರ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಿದೆ.

ಅವರು ಈ ಬಗ್ಗೆ ಪರಿಶೀಲಿಸಲು ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋಗೆ (CIBIL) ಗೆ ಕೋರಿದ್ದಾರೆ. ಟ್ವಿಟರ್‌ನಲ್ಲಿ, ರಾಜ್‌ ಕುಮಾರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ನನ್ನ ಪ್ಯಾನ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ನನ್ನ ಹೆಸರಿನಲ್ಲಿ 2500 ರೂ. ಸಣ್ಣ ಸಾಲ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ನನ್ನ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.

ಈ ವರ್ಷ ರಾಜ್‌ ಕುಮಾರ್ ವಂಚನೆಗೆ ಬಲಿಯಾಗುತ್ತಿರುವುದು ಇದು ಎರಡನೇ ಬಾರಿ. ಜನವರಿಯಲ್ಲಿ, ತನ್ನ ಹೆಸರನ್ನು ಬಳಸಿಕೊಂಡು 3 ಕೋಟಿ ರೂ. ಸುಲಿಗೆ ಮಾಡಲು ಕಳುಹಿಸಲಾದ ನಕಲಿ ಇಮೇಲ್ ಬಗ್ಗೆ ಅವರು ತಿಳಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...