![](https://kannadadunia.com/wp-content/uploads/2021/04/rajgfhf-1617252511.jpg)
ಈ ಸಂಬಂಧ ಟ್ವಿಟರ್ನಲ್ಲಿ ಮಾಹಿತಿ ನೀಡಿರುವ ಜಾವಡೇಕರ್ ‘ 2020ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ರಜನಿಕಾಂತ್ರ ಹೆಸರನ್ನ ಘೋಷಿಸುತ್ತಿರೋದಕ್ಕೆ ಸಂತಸವಾಗುತ್ತಿದೆ. ನಟ, ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಸಿನಿರಂಗಕ್ಕೆ ರಜನಿಕಾಂತ್ ನೀಡಿರುವ ಕೊಡುಗೆ ಅಪಾರ. ತೀರ್ಪುಗಾರರಾದ ಗಾಯಕಿ ಆಶಾ ಬೋಸ್ಲೆ, ನಿರ್ಮಾಪಕ ಸುಭಾಷ್ ಘಾಯ್, ನಟ ಮೋಹನ್ಲಾಲ್, ಗಾಯಕ ಶಂಕರ್ ಮಹದೇವನ್ ಹಾಗೂ ಹಿರಿಯ ನಟ ಬಿಸ್ವಜೀತ್ ಚಟರ್ಜಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಭಾರತ ಸಿನಿರಂಗದಲ್ಲೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಅಗ್ರಗಣ್ಯ ಗೌರವವಾಗಿದೆ. ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದಿಂದ ಸ್ಥಾಪನೆಗೊಂಡ ಚಲನಚಿತ್ರ ನಿರ್ದೇಶನಾಲಯವು ವಾರ್ಷಿಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಗೌರವವನ್ನ ನೀಡುತ್ತದೆ. ಭಾರತೀಯ ಚಿತ್ರರಂಗದಲ್ಲಿ ಅಪ್ರತಿಮ ಸಾಧನೆಗೈದ ಖ್ಯಾತ ಕಲಾವಿದರಿಗೆ ಈ ಗೌರವವನ್ನ ನೀಡಲಾಗುತ್ತದೆ.