ತೆರಿಗೆ ಪಾವತಿ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಸೂಪರ್ಸ್ಟಾರ್ ರಜನಿಕಾಂತ್ ಕೊನೆಗೂ ತಮ್ಮ ಒಡೆತನದ ಮದುವೆ ಹಾಲ್ಗೆ ದಂಡ ಸಹಿತ ತೆರಿಗೆಯನ್ನ ಪಾವತಿಸಿದ್ದಾರೆ .
ಚೆನ್ನೈನಲ್ಲಿ ರಜನಿಕಾಂತ್ ಒಡೆತನದ ರಾಘವೇಂದ್ರ ಮಂಟಪಕ್ಕೆ ಆಸ್ತಿ ತೆರಿಗೆ ಪಾವತಿ ವಿಳಂಬ ಹಿನ್ನೆಲೆ ಗ್ರೇಟರ್ ಚೆನ್ನೈ ಕಾರ್ಪೋರೇಷನ್ ನೋಟಿಸ್ ನೀಡಿತ್ತು. ಆದರೆ ಆಸ್ತಿ ತೆರಿಗೆ ಪಾವತಿಗೆ ನಿರಾಕರಿಸಿದ್ದ ರಜನಿಕಾಂತ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಆದರೆ ಹೈಕೋರ್ಟ್ನಲ್ಲಿ ರಜನಿಕಾಂತ್ಗೆ ಹಿನ್ನೆಡೆಯಾದ ಹಿನ್ನೆಲೆ ಇದೀಗ ದಂಡ ಸಮೇತ 6,39,846 ರೂಪಾಯಿಯನ್ನ ಪಾವತಿ ಮಾಡಿದ್ದಾರೆ. ಇದರಲ್ಲಿ 9,386 ರೂಪಾಯಿ ತೆರಿಗೆ ಪಾವತಿ ವಿಳಂಬ ಮಾಡಿದ್ದಕ್ಕೆ ವಿಧಿಸಿದ ದಂಡದ ಮೊತ್ತವೂ ಸೇರಿದೆ.