ಮುಂಬೈ: ಖ್ಯಾತ ನಟಿ ಶಿಲ್ಪಾಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ 121 ಬ್ಲ್ಯೂ ಫಿಲಂ ನಿರ್ಮಿಸಿದ್ದಾರೆ. ಬ್ಲೂಫಿಲಂಗಳಿಂದ ಕೋಟ್ಯಂತರ ರೂಪಾಯಿ ಲಾಭ ಗಳಿಸಿದ್ದಾರೆ ಎಂದು ಮುಂಬೈಯ ಅಪರಾಧ ಪೊಲೀಸರು ನಡೆಸಿದ ತನಿಖೆಯಲ್ಲಿ ಗೊತ್ತಾಗಿದೆ.
ರಾಜ್ ಕುಂದ್ರಾ ವ್ಯವಹಾರಗಳ ಕುರಿತಂತೆ ನ್ಯಾಯಾಲಯಕ್ಕೆ ಪೊಲೀಸರು ಮಾಹಿತಿ ನೀಡಿದ್ದು, ಆಪ್ ಮೂಲಕ ಕುಂದ್ರಾ ವ್ಯವಹಾರ ನಡೆಸುತ್ತಿದ್ದು, ಈ ಆಪ್ ಗಳಿಗೆ ಹಣ ನೀಡಿ 20 ಲಕ್ಷ ಮಂದಿ ಚಂದಾದಾರರಾಗಿದ್ದಾರೆ. ವಾಟ್ಸಾಪ್ ಮೂಲಕವೇ ರಾಜ್ ಕುಂದ್ರಾ ತಮ್ಮ ಕಾನೂನು ತಂಡ ಮತ್ತು ಸಿನಿಮಾ ನಿರ್ಮಾಣ ತಂಡಗಳೊಂದಿಗೆ ಮಾತುಕತೆ ನಡೆಸುತ್ತಿದ್ದರು ಎನ್ನುವುದು ಗೊತ್ತಾಗಿದೆ.
ಇದೊಂದು ಅಂತರಾಷ್ಟ್ರೀಯ ಜಾಲದಂತೆ ಕಂಡುಬರುತ್ತಿದ್ದು, ತಾವು ನಿರ್ಮಾಣ ಮಾಡಿದ ಬ್ಲೂ ಫಿಲಂಗಳನ್ನು 12 ಲಕ್ಷ ಡಾಲರ್ ಗೆ ಮಾರಾಟ ಮಾಡುವ ಕುರಿತಂತೆ ಕುಂದ್ರಾ ಚಾಟ್ ನಡೆಸಿದ್ದಾರೆ. ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.