ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಕೇಳಿ ಬರುತ್ತಿರುವ ನೀಲಿ ಚಿತ್ರ ನಿರ್ಮಾಣದ ಸಂಬಂಧ ನಡೆಯುತ್ತಿರುವ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾಗೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.
ಇದೇ ವೇಳೆ, ಪ್ರಕರಣದ ಸಂಬಂಧ ವಿಚಾರಣೆಗೆ ಬರಲು ಮುಂಬೈ ಕ್ರೈಂ ಬ್ರಾಂಚ್ನ ಆಸ್ತಿ ವಿಭಾಗದ ಸಿಬ್ಬಂದಿ ಆರ್ಮ್ಸ್ಪ್ರೈಂ ಮೀಡಿಯಾ ಪ್ರೈವೇಟ್ ಲಿ.ನ ನಿದೇರ್ಶಕ ಸೌರಭ್ ಕುಶ್ವಾಹಾಗೆ ಸಮನ್ಸ್ ಕೊಟ್ಟಿದ್ದಾರೆ.
ಪ್ರಕರಣ ಸಂಬಂಧ ರಾಜ್ ಕುಂದ್ರಾ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಆಗಸ್ಟ್ 10ರಂದು ಆಲಿಸುವುದಾಗಿ ಮುಂಬೈ ಸೆಶನ್ಸ್ ಕೋರ್ಟ್ ಗುರುವಾರ ತಿಳಿಸಿದೆ.
ಕೋವಿಡ್ 3ನೇ ಅಲೆ ಎದುರಿಸಲು ಎಷ್ಟರಮಟ್ಟಿಗೆ ಸಜ್ಜಾಗಿದೆ ಭಾರತ…?
ರಾಜ್ ಕುಂದ್ರಾರ ಲ್ಯಾಪ್ಟಾಪ್ನಲ್ಲಿ ಸಿಕ್ಕ ನೀಲಿ ಚಿತ್ರಗಳ 68 ವಿಡಿಯೋಗಳು ಸಿಕ್ಕಿದ್ದಾಗಿ ತನಿಖಾಧಿಕಾರಿ ಕೋರ್ಟ್ಗೆ ತಿಳಿಸಿದ್ದಾರೆ.