ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ರಾಜ್ ಕುಂದ್ರಾ, ಪ್ರಕರಣದ ಬಗ್ಗೆ ದಿನಕ್ಕೊಂದು ಸಂಗತಿ ಬಹಿರಂಗವಾಗ್ತಿದೆ. ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ಗಳಿಕೆ ಬಹಿರಂಗವಾಗಿದೆ. ಮುಂಬರುವ 3 ವರ್ಷಗಳಲ್ಲಿ ರಾಜ್ ಕುಂದ್ರಾ ಆದಾಯ 146 ಕೋಟಿ ರೂಪಾಯಿಗಿಂತ ಹೆಚ್ಚಾಗ್ತಿತ್ತು ಎಂದು ಅಂದಾಜಿಸಲಾಗಿದೆ.
ಮುಂಬೈ ಕ್ರೈಮ್ ಬ್ರಾಂಚ್ ಬಳಿ ಇರುವ ಪವರ್ ಪಾಯಿಂಟ್ ಪ್ರಸಂಟೇಷನ್ ಪ್ರಕಾರ, ಮುಂದಿನ ಮೂರು ವರ್ಷಗಳಲ್ಲಿ, ಪ್ಲ್ಯಾನ್ ಬಿ ಅಂದ್ರೆ Bolly Fame ಹೆಸರಿನ ಅಪ್ಲಿಕೇಶನ್ನಿಂದ ಬರಬಹುದಾದ ಆದಾಯವನ್ನು ಅಂದಾಜಿಸಲಾಗಿದೆ. ಈ ಪವರ್ ಪಾಯಿಂಟ್ ಪ್ರಸಂಟೇಷನ್ ಪ್ರಕಾರ, ರಾಜ್ ಕುಂದ್ರ ಎರಡನೇ ಅಪ್ಲಿಕೇಶನ್ ಬಾಲಿಫೇಮ್ 2021-22ರ ವರ್ಷದ ಒಟ್ಟು ಆದಾಯ 36,50,00,000 ಆಗಿದ್ದು, ಅದರಲ್ಲಿ 4,76,85000 ನಿವ್ವಳ ಲಾಭವಾಗಬೇಕಿತ್ತು.
2022-23ನೇ ಸಾಲಿನ ಒಟ್ಟು ಆದಾಯದ ಗುರಿ 73,00,00,000 ಆಗಿದ್ದು, ಇದರಲ್ಲಿ ನಿವ್ವಳ ಲಾಭ 4,76,85,000. ಆದರೆ 2023-24ರಲ್ಲಿ ಈ ಅಂಕಿ ಅಂಶವು ಅನೇಕ ಪಟ್ಟು ಹೆಚ್ಚಾಗಲಿತ್ತು. 2023-24ರ ಒಟ್ಟು ಆದಾಯವನ್ನು 1,46,00,00,000 ರೂಪಾಯಿ ಎಂದು ಅಂದಾಜಿಸಲಾಗಿದ್ದು, ನಿವ್ವಳ ಲಾಭ 30,42,01,400 ರೂಪಾಯಿಯಾಗಬೇಕಿತ್ತು.
ಕ್ರೈಂ ಬ್ರಾಂಚ್ ಬಳಿ ಇರುವ ದಾಖಲೆಯಲ್ಲಿ ಬಾಲಿಫೇಮ್ಗೆ ಸಂಬಂಧಿಸಿದ ಯೋಜಿತ ಆದಾಯ ಮತ್ತು ವೆಚ್ಚಗಳನ್ನು ಪೌಂಡ್ಗಳಲ್ಲಿ ತೋರಿಸಲಾಗಿದೆ. ರಾಜ್ ಕುಂದ್ರಾ ಪಿಎ ಆಗಿದ್ದ ಉಮೇಶ್ ಕಾಮತ್ ಬಂಧಿಸಿದ ನಂತರ ಫೆಬ್ರವರಿಯಲ್ಲಿ ಮುಂಬೈ ಅಪರಾಧ ಶಾಖೆ ಈ ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ಈ ದಾಖಲೆಗಳ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲದ ಕಾರಣ ರಾಜ್ ಕುಂದ್ರಾ ವಿಚಾರಣೆ ನಡೆಯುತ್ತಿದೆ.