ಬ್ರೇನ್ ಸ್ಟ್ರೋಕ್ನಿಂದ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್ ಹಿರಿಯ ನಟ ರಾಹುಲ್ ರಾಯ್ ಡಿಸ್ಚಾರ್ಜ್ ಆಗಿದ್ದಾರೆ.
ನವೆಂಬರ್ 26ರಂದು ಕಾರ್ಗಿಲ್ನಲ್ಲಿ ರಾಹುಲ್ ರಾಯ್ ಮೆದುಳಿನ ಪಾರ್ಶ್ವವಾಯುವಿಗೆ ಈಡಾಗಿದ್ದರು.
ರಾಹುಲ್ ರಾಯ್ರನ್ನ ಸೋಮವಾರ ಡಿಸ್ಚಾರ್ಜ್ ಮಾಡಲು ವೈದ್ಯರು ನಿರ್ಧರಿಸಿದ್ದರು.
ಆದರೆ ಕಾಗದ ಪತ್ರಗಳು ರೆಡಿಯಾಗೋಕೆ ವಿಳಂಬವಾದ ಕಾರಣ ಅವರನ್ನ ಮಾರನೇ ದಿನ ಮನೆಗೆ ಕರೆದೊಯ್ಯಲಾಗಿದೆ ಅಂತಾ ನಿರ್ದೇಶಕ ನಿಖಿಲ್ ಕುಮಾರ್ ಗುಪ್ತಾ ಮಾಹಿತಿ ನೀಡಿದ್ದಾರೆ.
ಮೊದಲಿನಂತೆ ಮಾತನಾಡೋದನ್ನ ರೂಢಿಸಿಕೊಳ್ಳಲು ರಾಹುಲ್ ರಾಯ್ ಸ್ಪೀಚ್ ಥೆರಪಿಗೆ ಒಳಗಾಗಲಿದ್ದಾರೆ ಅಂತಾ ಗುಪ್ತಾ ಹೇಳಿದ್ದಾರೆ.