ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ ನಟಿ ರಾಗಿಣಿ ದ್ವಿವೇದಿ ಜೈಲಿನಲ್ಲಿ ರಾತ್ರಿ ಕಳೆದಿದ್ದಾರೆ.
ರಾತ್ರಿ ರಾಗಿಣಿ ಜೈಲಿನಲ್ಲಿ ನೀಡಿದ ಊಟವನ್ನೇ ಮಾಡಿಲ್ಲ. ಸಿಸಿಬಿ ಅಧಿಕಾರಿಗಳು ನೀಡಿದ ಊಟ ಮಾಡಿದ್ದ ಅವರಿಗೆ ದಿಂಬು, ಚಾಪೆ, ಜಮಖಾನ, ಬೆಡ್ ಶೀಟ್ ನೀಡಲಾಗಿದ್ದು ಇಡೀ ರಾತ್ರಿ ಸೊಳ್ಳೆ ಕಾಟದಿಂದ ನಿದ್ದೆ ಮಾಡಿಲ್ಲವೆನ್ನಲಾಗಿದೆ
ಬೆಳಗಿನ ತಿಂಡಿಗೆ ಚಿತ್ರಾನ್ನ, ಅವಲಕ್ಕಿಯನ್ನು ಸೇವಿಸಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕ್ವಾರಂಟೈನ್ ಸೆಲ್ ನಲ್ಲಿರುವ ಅವರ ಕೋವಿಡ್ ಟೆಸ್ಟ್ ವರದಿ ಬರಬೇಕಿದೆ. ಡ್ರಗ್ಸ್ ಪ್ರಕರಣ ಆಗಿರುವುದರಿಂದ ಯಾರ ಭೇಟಿಗೂ ಅವಕಾಶ ಇರುವುದಿಲ್ಲ. ಜಾಮೀನು ಸಿಕ್ಕರೆ ಹೊರಗೆ ಬರಬಹುದು. ಸಿಸಿಬಿ ಸಾಕ್ಷ್ಯ ನೀಡಿದಲ್ಲಿ ಇನ್ನಷ್ಟು ದಿನ ಜೈಲಲ್ಲೇ ಇರಬೇಕಾಗುತ್ತದೆ ಎನ್ನಲಾಗಿದೆ.