alex Certify ಪುನೀತ್ ದೂರವಾಗಿ 12 ದಿನ: ಅಪ್ಪು ನೆನೆದು ರಾಘಣ್ಣ ಭಾವನಾತ್ಮಕ ಪೋಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುನೀತ್ ದೂರವಾಗಿ 12 ದಿನ: ಅಪ್ಪು ನೆನೆದು ರಾಘಣ್ಣ ಭಾವನಾತ್ಮಕ ಪೋಸ್ಟ್

ನಿನ್ನ ಚಿಂತನೆಗಳಿಂದಾಗಿ ಎಂದಿಗೂ ನಮ್ಮ ಜೊತೆ ಇರುವೆ ಎಂದು ಸಹೋದರ ಪುನೀತ್ ರಾಜಕುಮಾರ್ ಅವರನ್ನು ನೆನೆದು ರಾಘವೇಂದ್ರ ರಾಜಕುಮಾರ್ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.

ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೂರವಾಗಿ ಇಂದಿಗೆ 12 ದಿನಗಳಾಗಿವೆ. ಅಭಿಮಾನಿಗಳ ನೋವು ಕಡಿಮೆಯಾಗಿಲ್ಲ. ಯಾರಿಗೂ ಗೊತ್ತಾಗದಂತೆ ಮಾಡಿದ ಸಮಾಜಸೇವೆ ಅಪ್ಪು ಅವರ ನಿಧನದ ನಂತರ ಗೊತ್ತಾಗಿ ಅಪ್ಪು ವ್ಯಕ್ತಿತ್ವವನ್ನು ಜನರೆಲ್ಲ ಕೊಂಡಾಡುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ್, ತಮ್ಮ ಪುನೀತ್ ಅವರನ್ನು ನೆನೆದು ಫೇಸ್ಬುಕ್ ನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ. ಯಾರಿಗೂ ಗೊತ್ತಾಗದೆ ನೀನು ಸಮಾಜ ಸೇವೆ ಮಾಡಿದೆ. ನಿನ್ನಂತೆ ಸಮಾಜಸೇವೆ ಮಾಡುವ ಶಕ್ತಿಯನ್ನು ನನಗೆ ನೀಡು ಮಗನೇ ಎಂದು ಹೇಳಿದ್ದಾರೆ. ನಿನ್ನ ಚಿಂತನೆಗಳಿಂದಾಗಿ ನೀನು ಯಾವಾಗಲೂ ನಮ್ಮ ಜೊತೆಗೆ ಇರುತ್ತೀಯ ಎಂದು ರಾಘವೇಂದ್ರ ರಾಜಕುಮಾರ್ ಪೋಸ್ಟ್ ಮಾಡಿದ್ದಾರೆ.

Appu Magane I was an un employee u have given me a job to move with noble work of serving the society without telling anyone just be deaf dumb and blind while serving give me strength for that loving you living with ur thoughts forever❤️❤️❤️❤️
ವ್ಯಕ್ತಿ ಮತ್ತು ಮಗು ನ ಕಪ್ಪು-ಮತ್ತು-ಬಿಳಿ ಚಿತ್ರವಾಗಿರಬಹುದು
ವ್ಯಕ್ತಿ, ಮಗು ಮತ್ತು ಸ್ಟ್ಯಾಂಡಿಂಗ್ ನ ಚಿತ್ರವಾಗಿರಬಹುದು
2 ಜನರು ನ ಚಿತ್ರವಾಗಿರಬಹುದು
1 ವ್ಯಕ್ತಿ ನ ಚಿತ್ರವಾಗಿರಬಹುದು

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...