
ರಾಮನಗರ: ‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ವಿವೇಕ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಯ ನಂತರ ನಟಿ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ.
ನನಗೆ ವಿಷಯ ಗೊತ್ತಿರಲಿಲ್ಲ. ಮಾಧ್ಯಮಗಳಿಂದ ಗೊತ್ತಾಯಿತು. ಫೈಟರ್ ವಿವೇಕ್ ಮೃತಪಟ್ಟಿರುವುದುಷ್ಟೇ ನನಗೆ ಗೊತ್ತು. ಘಟನೆ ನಡೆದಾಗ ನಾನು ಅಲ್ಲಿ ಇರಲಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ. ಏನಾಗುತ್ತದೆ ಎಂಬುದನ್ನು ನೋಡೋಣ. ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆ ಅಲ್ಲ ಎಂದು ಅವರು ಹೇಳಿದ್ದಾರೆ.
ಇಂತಹ ದುರಂತ ನಡೆದಿರುವುದಕ್ಕೆ ನನಗೂ ನೋವು ಇದೆ. ಘಟನೆ ನಡೆದಾಗ ನಾನು ಅಲ್ಲಿ ಇಲ್ಲದ ಕಾರಣ ಉತ್ತರಿಸಲಾಗಲಿಲ್ಲ. ಘಟನೆ ನಡೆದ ದಿನ ನಾನು ಅಲ್ಲಿ ಇದ್ದಿದ್ದರೆ ಎಲ್ಲದಕ್ಕೂ ಉತ್ತರಿಸುತ್ತಿದ್ದೆ ಎಂದು ಬಿಡದಿ ಪೊಲೀಸ್ ಠಾಣೆ ಬಳಿ ನಟಿ ರಚಿತರಾಮ್ ಹೇಳಿಕೆ ನೀಡಿದ್ದಾರೆ.
ಆಗಸ್ಟ್ 9 ರಂದು ರಾಮನಗರ ಸಮೀಪದ ಜೋಗನಪಾಳ್ಯ ಬಳಿ ಶೂಟಿಂಗ್ ವೇಳೆ ಕ್ರೇನ್ ವಿದ್ಯುತ್ ತಂತಿಗೆ ತಗುಲಿ ವಿವೇಕ್ ಸಾವನ್ನಪ್ಪಿದರು. ಇಂದು ನಟಿ ರಚಿತಾ ರಾಮ್ ಅವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.