
ಚಂಡೀಗಢ: ರಸ್ತೆ ಅಪಘಾತದಲ್ಲಿ ಪಂಜಾಬ್ ನ ಖ್ಯಾತ ಗಾಯಕ ದಿಲ್ಜಾನ್ ಸಿಂಗ್ ಮೃತಪಟ್ಟಿದ್ದಾರೆ. 31 ವರ್ಷದ ದಿಲ್ಜಾನ್ ಸಿಂಗ್ ಆಲ್ಬಂ ಸಾಂಗ್ ಗಳ ಮೂಲಕ ಮನೆ ಮಾತಾಗಿದ್ದರು.
ಅಮೃತಸರ -ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರು ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಕರ್ತಾರ್ಪುರದಿಂದ ಅಮೃತಸರಕ್ಕೆ ತೆರಳುತ್ತಿದ್ದ ಕಾರ್ ನಿಯಂತ್ರಣ ತಪ್ಪಿ ನಿಂತಿದ್ದ ಟ್ರಕ್ ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ದಿಲ್ಜಾನ್ ಸಿಂಗ್ ಮೃತಪಟ್ಟಿದ್ದಾರೆ.