“ಫೋಕಿಂಗ್ ದೇಸಿ” ಎಂಬ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಸೆಪ್ಟೆಂಬರ್ 4 ರಂದು ಅಪ್‌ಲೋಡ್ ಆಗಿರುವ ಪಂಜಾಬಿ ಬಾಂಗ್ರಾ ನೃತ್ಯವೊಂದು ನೆಟ್ಟಿಗರನ್ನು ಸೆಳೆದಿದೆ. ಕೇವಲ ಪಂಜಾಬ್ ಮಾತ್ರವಲ್ಲದೇ ವಿಶ್ವಾದ್ಯಂತ ವಿಡಿಯೋ ಪ್ರಸಿದ್ಧವಾಗಿದೆ. ಕಲೆಗೆ ಪ್ರಾದೇಶಿಕ ಮಿತಿಯಿಲ್ಲ ಎಂಬುದನ್ನು ಈ ವಿಡಿಯೋ ಸಾಬೀತು ಮಾಡಿದೆ.
ಸಂಗೀತಕಾರ ಡ್ಯಾಡಿ ಯಾಂಕೀ ಅವರ ಪ್ರಸಿದ್ಧ ಗ್ಯಾಸೋಲಿನಾ ಹಾಡಿಗೆ ಪಂಜಾಬಿ ಯುವಕರು ಬಿಳಿ, ಕೆಂಪು, ಹಳದಿ ಮುಂತಾದ ಸಿಖ್ ಪೇಟ ತೊಟ್ಟು ನೃತ್ಯ ಮಾಡಿದ್ದಾರೆ. ಕಪ್ಪು, ಪೈಜಾಮಾ, ಕುರ್ತಾ ತೊಟ್ಟು ಪಂಜಾಬಿ ಜಾನಪದ ಬಾಂಗ್ರಾ ನೃತ್ಯಗಳಲ್ಲಿ ಬಳಸುವ ಸಾಪ್ ಹಿಡಿದು ಅತಿ ಚುರುಕಾಗಿ ಕುಣಿದು ಎಲ್ಲರ ಚಪ್ಪಾಳೆ ಗಿಟ್ಟಿಸಿದ್ದಾರೆ.
ವಿಡಿಯೋವನ್ನು 90 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದು, 850 ರಷ್ಟು ಕಮೆಂಟ್‌ಗಳು ಬಂದಿವೆ. ಸ್ಮೈಲಿ, ಬೆಂಕಿ ಮುಂತಾದ ಚಿತ್ರಗಳು, ಗುಡ್ ಜಾಬ್ ಮುಂತಾದ ಪ್ರೇರಣಾದಾಯಕ ಕಮೆಂಟ್‌ಗಳನ್ನು ಮಾಡಿ ನೆಟ್ಟಿಗರು ಹುರಿದುಂಬಿಸಿದ್ದಾರೆ. ಗ್ಯಾಸೋಲಿನಾ ಡ್ಯಾಡಿ ಯಾಂಕೀ ಹಾಗೂ ಇದ್ದೀ ಅವಿಲಾ ಅವರು ರಚಿಸಿದ್ದಾಗಿದೆ. 2004 ರಲ್ಲಿ ಡ್ಯಾಡಿ ಯಾಂಕೀ ಅವರ ಬೇರಿಯೋ ಫಿನೋ ಎಂಬ ಆಲ್ಬಂ ಹೊರ ಬಂದಿತ್ತು. 15 ವರ್ಷ ಕಳೆದರೂ ಇನ್ನೂ ಹಾಡು ಜನಮಾನಸದಿಂದ ದೂರವಾಗಿಲ್ಲ. ಇತ್ತೀಚಿನ ಯುವಕರು ಹಳೆಯ ಹಾಡಿಗೆ ನೃತ್ಯ ಮಾಡುವ ಮೂಲಕ ಪ್ರಸಿದ್ಧರಾಗಿದ್ದಾರೆ.
https://www.instagram.com/p/CEuIYSxJro_/?utm_source=ig_web_copy_link