
‘ಗಂಧದಗುಡಿ’ ಸಾಕ್ಷ್ಯ ಚಿತ್ರದ ಬಗ್ಗೆ ಪುನೀತ್ ರಾಜಕುಮಾರ್ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ‘ಗಂಧದಗುಡಿ’ಯ ಸಣ್ಣ ತುಣುಕು ಪೋಸ್ಟ್ ಮಾಡಲಾಗಿದ್ದು, ತುಂಬಾ ದಿನಗಳ ನಂತರ ಅಪ್ಪು ಖಾತೆಯಿಂದ ಪೋಸ್ಟ್ ಮಾಡಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ.
ನಿಮ್ಮನ್ನೆಲ್ಲಾ ನೋಡುವ ಕಾತರದಲ್ಲಿ ಎಂದು ಬರೆದು ಪೋಸ್ಟ್ ಹಾಕಲಾಗಿದೆ. ಇಂದು ಪುನೀತ್ ರಾಜಕುಮಾರ್ ಅವರ ಕನಸು ‘ಗಂಧದ ಗುಡಿ’ ರಾಜ್ಯದಲ್ಲಿ ಮಾತ್ರವಲ್ಲದೇ, ದೇಶ, ವಿದೇಶಗಳಲ್ಲೂ ತೆರೆ ಕಂಡಿದ್ದು, ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದಾರೆ.