
ಬೆಂಗಳೂರು: ನಾಳೆ ಬೆಳಗ್ಗೆ 10 ಗಂಟೆಗೆ ‘ಗಂಧದಗುಡಿ’ ಟೈಟಲ್ ಟೀಸರ್ ಬಿಡುಗಡೆಯಾಗಲಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆಗಿರುವ ‘ಗಂಧದಗುಡಿ’ ಟೀಸರ್ ಬಿಡುಗಡೆ ಬಗ್ಗೆ ಅಶ್ವಿನಿ ಪುನೀತ್ ರಾಜಕುಮಾರ್ ಮಾಹಿತಿ ನೀಡಿದ್ದಾರೆ.
ಹಿಂದೆಂದೂ ಕಾಣದ ಸಿನಿಮಾ ಅನುಭವ ನಿಮ್ಮ ಮುಂದೆ ನಾಳೆ ಪಿ.ಆರ್.ಕೆ. ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.
ಅಪ್ಪು ಕರುನಾಡಿನ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಅಮೋಘವರ್ಷ ಅವರ ಜೊತೆಗೂಡಿ ಸಿದ್ಧಪಡಿಸಿದ್ದಾರೆ. ‘ಗಂಧದಗುಡಿ’ ಹೆಸರಿನ ಡಾಕ್ಯುಮೆಂಟರಿ ಕನ್ನಡ ರಾಜ್ಯೋತ್ಸವದ ದಿನ ನವೆಂಬರ್ 1 ರಂದು ಬಿಡುಗಡೆಯಾಗಬೇಕಿತ್ತು. ಅದು ಅಪ್ಪು ಕನಸು ಕೂಡ ಆಗಿತ್ತು. ಅದಕ್ಕಾಗಿ ಸಿದ್ಧತೆ ಕೂಡ ಮಾಡಿಕೊಂಡಿದ್ದರು. ಆದರೆ, ಅಕ್ಟೋಬರ್ 29 ರಂದು ಅಕಾಲಿಕವಾಗಿ ಅಪ್ಪು ಅಗಲಿದ್ದಾರೆ. ಅವರ ಕನಸನ್ನು ನನಸು ಮಾಡಲು ಅಶ್ವಿನಿ ಪುನೀತ್ ರಾಜಕುಮಾರ್ ಮುಂದಾಗಿದ್ದಾರೆ.