ಬಾಲಿವುಡ್ ನಟಿ, ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಇತ್ತೀಚಿನ ದಿನಗಳಲ್ಲಿ ತಮ್ಮ ಪುಸ್ತಕದ ವಿಷ್ಯಕ್ಕೆ ಚರ್ಚೆಯಲ್ಲಿದ್ದಾರೆ. ಪ್ರಿಯಾಂಕ ಬರೆದ ಅನ್ ಫಿನಿಶ್ಡ್ ಪುಸ್ತಕ ಇಂದು ಹೊರ ಬರ್ತಿದೆ. ಈ ಪುಸ್ತಕದಲ್ಲಿ ಪ್ರಿಯಾಂಕಾ ಅನೇಕ ವಿಷ್ಯಗಳನ್ನು ಹೇಳಿದ್ದಾರೆ. ಅದ್ರಲ್ಲಿ ತಮ್ಮ ಲುಕ್ ಬಗ್ಗೆ ಮಾತನಾಡಿದ್ದ ನಿರ್ದೇಶಕರ ಬಗ್ಗೆಯೂ ಬರೆದಿದ್ದಾರೆ.
ನಿರ್ದೇಶಕ/ನಿರ್ಮಾಪಕರೊಬ್ಬರನ್ನು ಭೇಟಿಯಾಗಿದ್ದೆ. ಈ ಸಂದರ್ಭದಲ್ಲಿ ಕೆಲ ಮಾತುಕತೆ ನಂತ್ರ ನಿರ್ದೇಶಕರು ನನ್ನನ್ನು ನಿಲ್ಲುವಂತೆ ಹೇಳಿದ್ರು. ನಾನು ನಿಂತ ಮೇಲೆ ನನ್ನನ್ನು ತುಂಬಾ ಸಮಯ ನೋಡಿದ್ರು. ನಂತ್ರ ಸ್ತನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಸಲಹೆ ನೀಡಿದ್ರು. ದವಡೆ ಹಾಗೂ ಹಿಂಭಾಗವನ್ನು ಕೂಡ ಸರಿ ಮಾಡಿಕೊಳ್ಳುವಂತೆ ಹೇಳಿದ್ರು. ಲಂಡನ್ ನಲ್ಲಿ ವೈದ್ಯರೊಬ್ಬರ ಪರಿಚಯವಿದೆ. ಅವ್ರನ್ನು ಭೇಟಿಯಾಗಿ ಎಂದು ನನಗೆ ಸಲಹೆ ನೀಡಿದ್ರು ಎಂದು ಪ್ರಿಯಾಂಕ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಈ ಬಗ್ಗೆ ಸ್ವಲ್ಪ ಚಿಂತೆಯಾಗಿತ್ತು. ಆದ್ರೆ ಇದನ್ನು ಯಾರ ಬಳಿಯೂ ಹೇಳಿಕೊಳ್ಳಲಿಲ್ಲ. ಎಂದಿಗೂ ನಾನು ಕೆಳಗೆ ಬೀಳಲು ಬಿಡಲಿಲ್ಲ. ನನ್ನ ಕೆಲಸವನ್ನು ನಾನು ಮಾಡುತ್ತ ಬಂದೆ. ಈಗ ನಾನು ಸದೃಢವಾಗಿದ್ದು,ಈ ಬಗ್ಗೆ ಮುಕ್ತವಾಗಿ ಮಾತನಾಡಬಲ್ಲೆ. ನನ್ನ ಪುಸ್ತಕ ಯಾರಿಗೂ ವಿವರಣೆ ನೀಡುವುದಿಲ್ಲ. ನನ್ನ ದೃಷ್ಟಿಕೋನದಲ್ಲಿ ನಾನು ನೋಡಿದ ನನ್ನ ಕಥೆ ಇದು ಎಂದು ಪ್ರಿಯಾಂಕಾ ಹೇಳಿದ್ದಾರೆ.