
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಆಕೆಯ ಸಿಂಗರ್ ಪತಿ ನಿಕ್ ಜೋನಾಸ್ ತಮ್ಮ ಅಭಿಮಾನಿಗಳಿಗೆ ರಿಲೇಷನ್‌ಶಿಪ್ ಗೋಲ್ ಒಂದನ್ನು ಕೊಡುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಡದಿ ಪ್ರಿಯಾಂಕಾ ಜೊತೆಗೆ ದೀರ್ಘ ಚುಂಬನದಲ್ಲಿ ತೊಡಗಿರುವ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ ಜೋನಾಸ್. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಇಬ್ಬರೂ ಜೋಧ್ಪುರದ ಉಮೇದ್ ಭವನ ಪ್ಯಾಲೇಸ್‌ನಲ್ಲಿ 2018ರ ಡಿಸೆಂಬರ್ 2ರಂದು ಮದುವೆಯಾಗಿದ್ದರು. ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯಗಳಂತೆ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅನೇಕ ದಿನಗಳ ಮಟ್ಟಿಗೆ ಇಬ್ಬರೂ ಮದುವೆ ಸಂಭ್ರಮಾಚರಣೆ ಇಟ್ಟುಕೊಂಡಿದ್ದರು.
