
ಬಾಲಿವುಡ್ ನಟಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಇದೇ ತಿಂಗಳು ಮಗುವಿಗೆ ಜನ್ಮ ನೀಡಲಿದ್ದಾರೆ. ಪತಿ ಕೊಹ್ಲಿ ಜೊತೆ ಆಗಾಗ ಅನುಷ್ಕಾ ಆಸ್ಪತ್ರೆಗೆ ಹೋಗಿ ಬರ್ತಿದ್ದಾರೆ. ಪ್ರೆಗ್ನೆನ್ಸಿ ಸಮಯವನ್ನು ಎಂಜಾಯ್ ಮಾಡ್ತಿರುವ ನಟಿ ಪಾನಿಪುರಿ ಸವಿದಿದ್ದಾರೆ.
ಇನ್ಸ್ಟ್ರಾಗ್ರಾಮ್ ನಲ್ಲಿ ಅನುಷ್ಕಾ ಇದರ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಅನುಷ್ಕಾ, ಖಾಸಗಿ ಬದುಕಿನ ಫೋಟೋ ತೆಗೆದ ಛಾಯಾಗ್ರಾಹಕರ ವಿರುದ್ಧ ಅನುಷ್ಕಾ ಕೋಪಗೊಂಡಿದ್ದರು. ಇನ್ಸ್ಟ್ರಾಗ್ರಾಮ್ ನಲ್ಲಿ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಫೋಟೋ ತೆಗೆಯಲು ಅನುಮತಿ ನೀಡದೆ ಹೋದ್ರೂ ಫೋಟೋ ತೆಗೆದಿದ್ದಾರೆ. ಖಾಸಗಿ ಬದುಕಿಗೆ ಧಕ್ಕೆ ತರುವುದನ್ನು ಬಂದ್ ಮಾಡಿ ಎಂದು ಅನುಷ್ಕಾ ಬರೆದುಕೊಂಡಿದ್ದರು. ಛಾಯಾಗ್ರಾಹಕ ತೆಗೆದ ಫೋಟೋವನ್ನು ಹಂಚಿಕೊಂಡಿದ್ದರು. ಬಾಲ್ಕನಿಯಲ್ಲಿ ಕೊಹ್ಲಿ ಜೊತೆ ಅನುಷ್ಕಾ ಕುಳಿತಿರುವ ಫೋಟೋವನ್ನು ಕ್ಲಿಕ್ಕಿಸಲಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅನುಷ್ಕಾ ತಮ್ಮ ಫೋಟೋಗಳನ್ನು ಆಗಾಗ ಹಂಚಿಕೊಳ್ತಿರುತ್ತಾರೆ. ಜಿಮ್ ನಲ್ಲಿ ಕಸರತ್ತು ಮಾಡಿದ್ದ ವಿಡಿಯೋವನ್ನು ಅವರು ಹಂಚಿಕೊಂಡಿದ್ದರು.