ಮುಂಬೈ: ಗಾಂಜಾ ಪ್ರಕರಣದಲ್ಲಿ ಬಂಧಿತಳಾಗಿದ್ದ ಪ್ರೀತಿಕಾ ಚವಾಣ್, ಫೈಸಲ್ ಅವರಿಗೆ ಜಾಮೀನು ನೀಡಲಾಗಿದೆ. ಮುಂಬೈ ಕೋರ್ಟ್ ನಿಂದ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಅಕ್ಟೋಬರ್ 25 ರಂದು ಇವರಿಬ್ಬರನ್ನು ಬಂಧಿಸಲಾಗಿತ್ತು. ಪ್ರೀತಿಕಾ ಚವಾಣ್ ಅವರನ್ನು ಎನ್.ಸಿ.ಬಿ. ಬಂಧಿಸಿತ್ತು. ಬಂಧನದ ವೇಳೆ ಪ್ರೀತಿಕಾ ಬಳಿ ಇದ್ದ 99 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ವಿಶೇಷ ನ್ಯಾಯಾಲಯದ ವತಿಯಿಂದ ಜಾಮೀನು ನೀಡಲಾಗಿದೆ ಎಂದು ಹೇಳಲಾಗಿದೆ.