ಆನ್ ಲೈನ್ ಸ್ಟ್ರೀಮಿಂಗ್ ವೇದಿಕೆಯಲ್ಲಿ ಪ್ರಸಾರಗೊಂಡ ಪ್ರಾಂಕ್ ಕಾರ್ಯಕ್ರಮವೊಂದು ಮುಂಬೈ ನಿವಾಸಿಗಳನ್ನು ಗೊಂದಲಕ್ಕೆ ತಳ್ಳಿ, ನೂರಾರು ಮಂದಿ ಪೊಲೀಸರಿಗೆ ಕರೆ ಮಾಡಿದ ಪ್ರಸಂಗ ನಡೆದಿದೆ.
ಜನರ ಗಾಬರಿಯನ್ನು ಗಮನಿಸಿದ ಪೊಲೀಸ್ ಸೈಬರ್ ಸೆಲ್ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಕೇಳಿದ ಘಟನೆಯೂ ನಡೆಯಿತು.
ಸೋನಿ ಎಲ್ಐವಿಯ ಹೊಸ ಸರಣಿ ‘ಉಂಡೆಖಿ’ ಪ್ರಮೋಟ್ ಮಾಡಲು ಗಿಮಿಕ್ ಕಾರ್ಯಕ್ರಮ ರೂಪಿಸಲಾಗಿತ್ತು. ಅದನ್ನು ಗಿಮಿಕ್ ಎಂದು ತಿಳಿಯದ ಜನ ಪೊಲೀಸರಿಗೆ ಕರೆ ಮಾಡಿದರು, ಮತ್ತೆ ಕೆಲವರು ಪೊಲೀಸರನ್ನುದ್ದೇಶಿಸಿ ಟ್ವೀಟ್ ಮಾಡಿದರು.
ವ್ಯಕ್ತಿಯೊಬ್ಬ ಕರೆ ಮಾಡಿ ಸಹಾಯ ಬೇಡಿಕೊಂಡನು, ತಾನು ಒಂದು ಕೊಲೆಯ ಸಾಕ್ಷಿಯಾಗಿದ್ದು ಘಟನೆಯನ್ನು ಮೊಬೈಲ್ ನಲ್ಲಿ ದಾಖಲಿಸಿದ್ದೇನೆ. ಕೊಲೆಗಾರ ಈಗ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾನೆ, ಸಹಾಯ ಮಾಡಿ ಎಂದು ಸಂದೇಶ ಬಿತ್ತರವಾಗಿತ್ತು.
ಇದೇ ವೇಳೆ ಜನರಿಗಾದ ತೊಂದರೆಯನ್ನು ಗಮನಿಸಿದ ಸಂಸ್ಥೆ, ನಮ್ಮ ಶೋಗೆ ಸಂಬಂಧಪಟ್ಟಂತೆ ಕರೆ ಸ್ವೀಕರಿಸಿ ತೊಂದರೆಗೊಳಗಾಗಿದ್ದರೆ ಕ್ಷಮೆ ಯಾಚಿಸುತ್ತೇವೆ. ಆಕಸ್ಮಿಕವಾಗಿ ಇದು ಬಿತ್ತರವಾಗಿದೆ ಎಂದು ಹೇಳಿಕೊಂಡಿತು.