ಬೆಂಗಳೂರು: ಬ್ರಾಹ್ಮಣರ ಆಗ್ರಹಕ್ಕೆ ಮಣಿದಿರುವ ‘ಪೊಗರು’ ಚಿತ್ರತಂಡ ಸಿನಿಮಾದಲ್ಲಿನ 14 ವಿವಾದಿತ ಶಾಟ್ ಗಳಿಗೆ ಕತ್ತರಿ ಹಾಕಿದೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನ ಮಾಡಲಾಗಿದೆ ಎಂದು ಬ್ರಾಹ್ಮಣ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಕ್ಷಮೆಕೋರಿದ ಚಿತ್ರದ ನಿರ್ದೇಶಕ ನಂದಕಿಶೋರ್ ವಿವಾದಿತ ಅಂಶಗಳನ್ನು ಮ್ಯೂಟ್ ಮಾಡಲಾಗಿದ್ದು ಶೀಘ್ರವೇ ಕಟ್ ಮಾಡುವುದಾಗಿ ಹೇಳಿದ್ದರು.
ಅಂತೆಯೇ ಆ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಮತ್ತೆ ಸೆನ್ಸಾರ್ ಒಪ್ಪಿಗೆಯೊಂದಿಗೆ ಚಿತ್ರಪ್ರದರ್ಶನ ಮುಂದುವರೆಯಲಿದೆ ಎಂದು ಹೇಳಲಾಗಿದೆ.