ಬಾಲಿವುಡ್ ನಟಿ ಕಂಗನಾ ರಣಾವತ್ರ ಟ್ವಿಟರ್ ಖಾತೆಯನ್ನ ಶಾಶ್ವತವಾಗಿ ಅಮಾನತು ಮಾಡಬೇಕೆಂದು ಕೋರಿ ದೆಹಲಿ ಹೈಕೋರ್ಟ್ ಗೆ ಹೊಸ ಅರ್ಜಿಯೊಂದು ಸಲ್ಲಿಕೆಯಾಗಿದೆ.
ಕಂಗನಾ ಸಹೋದರಿ ರಂಗೋಲಿ ಟ್ವಿಟರ್ ಖಾತೆಯನ್ನ ಈ ವರ್ಷ ಅಮಾನತುಗೊಳಿಸಿದಂತೆಯೇ ಕಂಗಾನರ ಟ್ವಿಟರ್ ಖಾತೆಯನ್ನೂ ಅಮಾನತು ಮಾಡಿ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಕಂಗನಾ ರಣಾವತ್ ಪೋಸ್ಟ್ಗಳು ದೇಶದ ಜನರಲ್ಲಿ ನಿರಂತರ ದ್ವೇಷ, ಅಸಮಾನತೆಯನ್ನ ಹುಟ್ಟು ಹಾಕುತ್ತಿವೆ. ಆಕೆ ತನ್ನ ಉಗ್ರಗಾಮಿ ಟ್ವೀಟ್ ಮೂಲಕ ದೇಶವನ್ನ ವಿಭಜಿಸಲು ಹೊರಟಿದ್ದಾಳೆ. ಇದು ಮಾತ್ರವಲ್ಲದೇ ದೇಶದ ನ್ಯಾಯಾಂಗವನ್ನ ಪಪ್ಪುಸೇನೆ ಎಂದು ಅವಮಾನಿಸಿದ್ದಾಳೆ ಎಂದು ಅರ್ಜಿಯಲ್ಲಿ ನಮೂದಿಸಲಾಗಿದೆ.
ಅರ್ಜಿದಾರ ಈ ಎಲ್ಲಾ ವಿಚಾರದ ಬಗ್ಗೆ ಮುಂಬೈನ ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಕ್ಟೋಬರ್ನಲ್ಲಿ ಮುಂಬೈ ಮೂಲದ ವಕೀಲ ಅಲಿ ಕಾಶಿಫ್ ಖಾನ್ ಇದೇ ವಿಚಾರವಾಗಿ ಕಂಗನಾ ವಿರುದ್ಧ ದೂರು ದಾಖಲಿಸಿದ್ದರು. ಇದೀಗ ಮತ್ತೊಮ್ಮೆ ಕಂಗನಾ ವಿರುದ್ಧ ಅಲಿ ಕಾಶಿಫ್ ಸಮರ ಸಾರಿದ್ದಾರೆ.