ದೇಶಾದ್ಯಂತ ಕೋವಿಡ್-19 ಸಂಕಷ್ಟ ಇರುವ ಈ ಸಂದರ್ಭದಲ್ಲಿ ದಿನನಿತ್ಯದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಅನೇಕರು ಒದ್ದಾಡುತ್ತಿದ್ದಾರೆ. ಇಂಥವರ ನೆರವಿಗೆ ಬಂದಿರುವ ಚೆನ್ನೈ ಮೂಲದ ಹಿನ್ನೆಲೆ ಗಾಯಕರೊಬ್ಬರು ಸತತ 64 ದಿನಗಳಿಂದ ಹಾಡುತ್ತಲೇ ಬರುವ ಮೂಲಕ 15 ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದಾರೆ.
ಸತ್ಯನ್ ಮಹಾಲಿಂಗಮ್ ಹೆಸರಿನ ಈ ಗಾಯಕ, ಈ ದಿನಗಳಲ್ಲಿ ಸಂಕಷ್ಟದಲ್ಲಿರುವ ಸಂಗೀತಗಾರರಿಗೆ ನೆರವಾಗಲು ’ಸತ್ಯನ್ ಉತ್ಸವ್’ ಆರಂಭಿಸಿದ್ದು, ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ಮೂಲಕ ಈ ಅಭಿಯಾನ ನಡೆಸಿಕೊಂಡು ಹೋಗುತ್ತಿದ್ದಾರೆ.
“ಈ ಮುಂಚೆ ನಾವು ಪ್ರತಿ ತಿಂಗಳು 40-45 ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ 50,000 ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸುತ್ತಿದ್ದೆವು. ಆದರೆ ಲಾಕ್ಡೌನ್ ಇರುವ ಕಾರಣ ನಮ್ಮ ಗಳಿಕೆಯು ಶೂನ್ಯಕ್ಕೆ ತಲುಪಿದ್ದು, ಇದು ಇನ್ನೂ ಎಷ್ಟು ದಿನ ಹೀಗೇ ಇರುತ್ತದೋ ಹೇಳಲು ಬಾರದು” ಎಂದು ಮಹಾಲಿಂಗಂ ತಿಳಿಸಿದ್ದಾರೆ.